ADVERTISEMENT

ನಿಯಮ ಉಲ್ಲಂಘನೆ: ರಾಹುಲ್ ಗಾಂಧಿ ಪೋಸ್ಟ್ ಅಳಿಸಿಹಾಕಿದ ಫೇಸ್‌ಬುಕ್

ಪಿಟಿಐ
Published 20 ಆಗಸ್ಟ್ 2021, 12:31 IST
Last Updated 20 ಆಗಸ್ಟ್ 2021, 12:31 IST
ರಾಹುಲ್ ಗಾಂಧಿ (ಪಿಟಿಐ ಚಿತ್ರ)
ರಾಹುಲ್ ಗಾಂಧಿ (ಪಿಟಿಐ ಚಿತ್ರ)   

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಜತೆಗಿನ ಫೋಟೊ ಪೋಸ್ಟ್ ಮಾಡಿದ್ದನ್ನು ಫೇಸ್‌ಬುಕ್ ಅಳಿಸಿ ಹಾಕಿದೆ. ರಾಹುಲ್ ಸಂದೇಶವು ಸಾಮಾಜಿಕ ಮಾಧ್ಯಮ ತಾಣಗಳ ನೀತಿಯನ್ನು ಉಲ್ಲಂಘಿಸಿದೆ ಎಂದು ಫೇಸ್‌ಬುಕ್ ಹೇಳಿದೆ.

ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಿಂದ ಸಂದೇಶವನ್ನು ಅಳಿಸಿಹಾಕುವ ಬಗ್ಗೆ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ (ಎನ್‌ಸಿಪಿಸಿಆರ್) ಫೇಸ್‌ಬುಕ್ ಮಾಹಿತಿ ನೀಡಿತ್ತು.

ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಿಂದ ಸಂದೇಶವನ್ನು ಅಳಿಸಿಹಾಕುವಂತೆ ರಾಹುಲ್ ಗಾಂಧಿ ಅವರಿಗೆ ಕೆಲವು ದಿನಗಳ ಹಿಂದೆ ಫೇಸ್‌ಬುಕ್‌ ಸೂಚಿಸಿತ್ತು.

ADVERTISEMENT

‘ನೀತಿಗಳ ಉಲ್ಲಂಘನೆಯಾದ ಕಾರಣ ನಾವು ಸಂದೇಶವನ್ನು ಅಳಿಸಿಹಾಕುವ ತೀರ್ಮಾನ ಕೈಗೊಳ್ಳಬೇಕಾಯಿತು’ ಎಂದು ಫೇಸ್‌ಬುಕ್‌ ವಕ್ತಾರರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ನಿಯಮಗಳು ಮತ್ತು ಭಾರತೀಯ ಕಾನೂನಿನ ಉಲ್ಲಂಘನೆಯಾದರೆ ಅಂಥ ಸಂದೇಶಗಳ ವಿರುದ್ಧ ಫೇಸ್‌ಬುಕ್‌ ಕ್ರಮ ಕೈಗೊಳ್ಳುತ್ತದೆ. ರಾಹುಲ್ ಅವರ ಸಂದೇಶದಲ್ಲಿ 2015ರ ಬಾಲ ನ್ಯಾಯ ಕಾಯ್ದೆ ಮತ್ತು 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಯಮಗಳು ಉಲ್ಲಂಘನೆಯಾಗಿದ್ದು, ಕ್ರಮ ಕೈಗೊಳ್ಳುವಂತೆ ಹಾಗೂ ಸಂದೇಶ ಅಳಿಸಿಹಾಕುವಂತೆ ಫೇಸ್‌ಬುಕ್‌ಗೆ ಎನ್‌ಸಿಪಿಸಿಆರ್ ಕಳೆದ ವಾರ ಸೂಚಿಸಿತ್ತು.

ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಜತೆಗಿನ ಫೋಟೊ ಪೋಸ್ಟ್ ಮಾಡಿದ್ದಕ್ಕೆ ಈ ತಿಂಗಳ ಆರಂಭದಲ್ಲಿ ಟ್ವೀಟರ್ ಕೂಡ ರಾಹುಲ್ ಗಾಂಧಿ ಅವರ ಖಾತೆಯನ್ನು ಲಾಕ್ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.