ADVERTISEMENT

'ಪಾವ್ರಿ ಪವರ್'‌! ಪಾಕ್‌ ಯುವತಿಗೆ ದಿಢೀರ್ ಜನಪ್ರಿಯತೆ ಕೊಟ್ಟ 5 ಸೆಕೆಂಡ್‌ ವಿಡಿಯೊ

ರಾಯಿಟರ್ಸ್
Published 2 ಮಾರ್ಚ್ 2021, 11:53 IST
Last Updated 2 ಮಾರ್ಚ್ 2021, 11:53 IST
 ದಾನನೀರ್ ಮೊಬೀನ್ ( ರಾಯಿಟರ್ಸ್‌ ಚಿತ್ರ)
ದಾನನೀರ್ ಮೊಬೀನ್ ( ರಾಯಿಟರ್ಸ್‌ ಚಿತ್ರ)   

ಕರಾಚಿ: ಪಾಕಿಸ್ತಾನದ 19 ವರ್ಷದ ವಿದ್ಯಾರ್ಥಿನಿ ದಾನನೀರ್ ಮೊಬೀನ್ ತಮ್ಮ ಐದು ಸೆಕೆಂಡ್‌ ವಿಡಿಯೊ ಮೂಲಕ ದಿಢೀರ್‌ ಖ್ಯಾತಿ ಗಳಿಸಿಕೊಂಡಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಮಾತ್ರವಲ್ಲ ಭಾರತ ಉಪಖಂಡದಲ್ಲೂ ಆಕೆಯ ವಿಡಿಯೊ ಭಾರಿ ವೈರಲ್‌ ಆಗಿದೆ. ಆಕೆಯ ಮಾತು ಜನಪ್ರಿಯ ಡೈಲಾಗ್‌ ಆಗಿ ಮಾರ್ಪಟ್ಟಿದೆ.

ದಾನನೀರ್ ಮೊಬೀನ್ ಅವರು ಉತ್ತರ ಪಾಕಿಸ್ತಾನದ ನಥೈಗಲಿ ಪರ್ವತ ಶ್ರೇಣಿಗೆ ಭೇಟಿ ನೀಡಿದ್ದ ವೇಳೆ ಚಿತ್ರೀಕರಿಸಿ, ಇನ್‌ಸ್ಟಾಗ್ರಾಮ್‌ಗೆ ಅಪ್ಲೋಡ್ ಮಾಡಿದ ಕಿರು ವಿಡಿಯೊದಲ್ಲಿ ಆಕೆ ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತಿರುವುದು ಕಾಣುತ್ತದೆ.

ಕ್ಯಾಮೆರಾವನ್ನು ಅತ್ತಿತ್ತ ತಿರುಗಿಸುತ್ತಾ ' ಏ ಹಮಾರಿ ಕಾರ್‌ ಹೇ, ಏ ಹಮ್‌ ಹೇ, ಪಾರ್ಟಿ ಹೋ ರಿಹಿ ಹೇ (ಇದು ನಮ್ಮ ಕಾರು, ಇದು ನಮ್ಮದು, ಇಲ್ಲಿ ಪಾರ್ಟಿ ಆಗಲಿದೆ),' ಎಂದು ಹೇಳುತ್ತಾರೆ. ಆದರೆ, 'ಪಾರ್ಟಿ' ಎಂದು ಹೇಳುವಾಗ ಆಕೆ 'ಪಾವ್ರಿ' ಎನ್ನುತ್ತಾರೆ. ದಾನನೀರ್ ಮೊಬೀನ್ 'ಪಾರ್ಟಿ' ಎಂಬುದನ್ನು ಉಚ್ಚರಿಸಿದ ರೀತಿ, ಅದನ್ನು ಹೇಳುವಾಗ ಅವರು ತೋರಿದ ದೇಹ ಭಾಷೆ ಸದ್ಯ ಯುವ ಸಮುದಾಯದ ಆಕರ್ಷಣೆಗೆ ಕಾರಣವಾಗಿದೆ.

ADVERTISEMENT

ಈ ವಿಡಿಯೊವನ್ನು ಮೊಬೀನ್‌ ಫೆ.6ರಂದು ಇನ್‌ಸ್ಟಾಗ್ರಾಮ್‌ಗೆ ಹಾಕಿದ್ದು, ಭಾರಿ ವೈರಲ್‌ ಆಗಿದೆ. ಪಾಕಿಸ್ತಾನ ಮಾತ್ರವಲ್ಲದೇ, ಭಾರತದಲ್ಲೂ ಆಕೆ ಈಗ ಜನಪ್ರಿಯರಾಗಿದ್ದಾರೆ. ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

'ಅದು ಅತ್ಯಂತ ಸಾಮಾನ್ಯ ವಿಡಿಯೊ ಆಗಿತ್ತು. ಆರಂಭದಲ್ಲಿ ಅದನ್ನು ಅಪ್‌ಲೋಡ್ ಮಾಡುವ ಯಾವುದೇ ಉದ್ದೇಶ ನನಗಿರಲಿಲ್ಲ' ಎಂದು ಮೊಬೀನ್ ಹೇಳಿಕೊಂಡಿದ್ದಾರೆ. ಅಲ್ಲದೆ, ವಿಡಿಯೊ ವೈರಲ್‌ ಆಗಿರುವ ಬಗ್ಗೆ ಅವರು ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲೂ ಜನಪ್ರಿಯ

ನಟಿ ದೀಪಿಕಾ ಪಡುಕೋಣೆ ಮತ್ತು 'ಅಮೂಲ್‌' ಸಂಸ್ಥೆಯವರು ಪ್ರಚಾರಕ್ಕೆ ಮೊಬೀನ್‌ ಅವರ ಈ ಮಾತನ್ನು ಬಳಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.