ADVERTISEMENT

ಆರ್‌ಬಿಐ ಟ್ವಿಟರ್‌ ಖಾತೆ ಹಿಂಬಾಲಕರ ಸಂಖ್ಯೆ 10 ಲಕ್ಷಕ್ಕೆ ಏರಿಕೆ

ಪಿಟಿಐ
Published 22 ನವೆಂಬರ್ 2020, 11:01 IST
Last Updated 22 ನವೆಂಬರ್ 2020, 11:01 IST
ಭಾರತೀಯ ರಿಸರ್ವ್‌ ಬ್ಯಾಂಕ್‌
ಭಾರತೀಯ ರಿಸರ್ವ್‌ ಬ್ಯಾಂಕ್‌   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಟ್ವಿಟರ್‌ ಖಾತೆ ಹಿಂಬಾಲಕರ ಸಂಖ್ಯೆ 10 ಲಕ್ಷಕ್ಕೆ (1 ಮಿಲಿಯನ್‌) ಏರಿಕೆಯಾಗಿದೆ. ಇಷ್ಟು ದೊಡ್ಡ ಸಂಖ್ಯೆಯ ಟ್ವಿಟರ್ ಫಾಲೋವರ್ಸ್‌ ಹೊಂದಿರುವ ವಿಶ್ವದ ಮೊದಲ ಕೇಂದ್ರ ಬ್ಯಾಂಕ್‌ ಆಗಿದೆ.

ಆರ್‌ಬಿಐ ಟ್ವಿಟರ್‌ನಲ್ಲಿ ಖಾತೆ ಹಿಂಬಾಲಕರ ಸಂಖ್ಯೆಯಲ್ಲಿ ಯುಎಸ್‌ ಫೆಡರಲ್‌ ರಿಸರ್ವ್‌ ಮತ್ತು ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ ಅನ್ನು ಹಿಂದಿಕ್ಕಿದೆ. ಅತ್ಯಂತ ಜನಪ್ರಿಯ ಕೇಂದ್ರ ಬ್ಯಾಂಕ್‌ ಆಗಿ ಹೊರಹೊಮ್ಮಿದ್ದು, ಇತ್ತೀಚಿಗೆ ಆರ್‌ಬಿಐ ಹಿಂಬಾಲಕರ ಸಂಖ್ಯೆ 9.66 ಲಕ್ಷದಿಂದ 10 ಲಕ್ಷಕ್ಕೆ ಏರಿಕೆಯಾಗಿದೆ.

‘ಆರ್‌ಬಿಐ ಟ್ವಿಟರ್‌ ಖಾತೆಯಲ್ಲಿ ಇಂದು ಒಂದು ಮಿಲಿಯನ್‌ ಹಿಂಬಾಲಕರನ್ನು ಹೊಂದಿದೆ. ಇದು ಹೊಸ ಮೈಲಿಗಲ್ಲು ಆಗಿದೆ. ಆರ್‌ಬಿಐನಲ್ಲಿರುವ ನನ್ನ ಎಲ್ಲ ಸಹೋದ್ಯೋಗಿಗಳಿಗೆ ಅಭಿನಂದನೆಗಳು’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್ ಟ್ವೀಟ್‌ ಮಾಡಿದ್ದಾರೆ.

ADVERTISEMENT

ವಿಶ್ವದ ಅತ್ಯಂತ ಶಕ್ತಿಶಾಲಿ ಕೇಂದ್ರ ಬ್ಯಾಂಕ್‌ ಎಂದು ಗುರುತಿಸಿಕೊಂಡಿರುವ ಯುಎಸ್‌ ಫೆಡರಲ್‌ ರಿಸರ್ವ್‌ ಬ್ಯಾಂಕ್‌ 6.67 ಲಕ್ಷ ಟ್ವಿಟರ್‌ ಹಿಂಬಾಲಕರನ್ನು ಹೊಂದಿದ್ದು, ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ (ಇಸಿಬಿ) 5.91 ಲಕ್ಷ ಹಿಂಬಾಲಕರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.