ADVERTISEMENT

ನಿಷೇಧಿತ ಕಂಟೆಂಟ್ ತೆಗೆದುಹಾಕದ ಫೇಸ್‌ಬುಕ್, ಟ್ವಿಟರ್‌ಗೆ ದಂಡ ವಿಧಿಸಿದ ರಷ್ಯಾ

ಪಿಟಿಐ
Published 14 ಸೆಪ್ಟೆಂಬರ್ 2021, 14:05 IST
Last Updated 14 ಸೆಪ್ಟೆಂಬರ್ 2021, 14:05 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ಮಾಸ್ಕೋ: ನಿಷೇಧಿತ ಕಂಟೆಂಟ್‌ಗಳನ್ನು ಡಿಲೀಟ್ ಮಾಡದ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್ ಕಂಪನಿಗಳಿಗೆ ರಷ್ಯಾ ದಂಡ ವಿಧಿಸಿದೆ.

ಸಂಸತ್ ಚುನಾವಣೆಯಲ್ಲಿ ಈ ಸಾಮಾಜಿಕ ಜಾಲತಾಣ ಕಂಪನಿಗಳು ಮೂಗು ತೂರಿಸುತ್ತಿವೆ ಎಂದು ಆರೋಪಿಸಿರುವ ರಷ್ಯಾ, ಅಮೆರಿಕ ಮೂಲದ ಟೆಕ್ ಕಂಪನಿಗಳ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸುತ್ತಿದೆ.

ಮಾಸ್ಕೋದ ನ್ಯಾಯಾಲಯವು ಮಂಗಳವಾರ ಫೇಸ್‌ಬುಕ್‌ಗೆ ಐದು ದಂಡಗಳನ್ನು ವಿಧಿಸಿದ್ದು, ಇದರ ಒಟ್ಟು ಮೊತ್ತ 21 ಮಿಲಿಯನ್ ರೂಬಲ್ಸ್‌ (2,88,000 ಡಾಲರ್) ಎಂದು ಅಧಿಕೃತ ಟೆಲಿಗ್ರಾಂ ಚಾನಲ್ ತಿಳಿಸಿದೆ.

ADVERTISEMENT

ರಷ್ಯಾ ದೇಶವು ತಾನು ಕಾನೂನುಬಾಹಿರ ಎಂದು ಸೂಚಿಸಿದ ವಿಷಯವನ್ನು ತೆಗೆದುಹಾಕದ ಸಾಮಾಜಿಕ ವೇದಿಕೆಗಳ ವಿರುದ್ಧ ನಿಯಮಿತವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದಾಹರಣೆಗೆ ಪೋರ್ನೊಗ್ರಫಿ, ಮಾದಕದ್ರವ್ಯ ಮತ್ತು ಆತ್ಮಹತ್ಯೆಯಂತಹ ಕಂಟೆಂಟ್‌ಗಳ ವಿರುದ್ಧ ರಷ್ಯಾ ಕ್ರಮ ಜರುಗಿಸುತ್ತಿದೆ.

ರಷ್ಯಾದಲ್ಲಿ ಫೇಸ್‌ಬುಕ್‌ಗೆ ಈವರೆಗೆ 90 ಮಿಲಿಯನ್ ರೂಬಲ್ಸ್ ಮತ್ತು ಟ್ವಿಟರ್‌ಗೆ 45 ಮಿಲಿಯನ್ ರೂಬಲ್ಸ್ ದಂಡ ವಿಧಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅದೇ ಅಪರಾಧಗಳು ಮತ್ತು ರಷ್ಯಾದದೇಶೀಯ ಸೇವೆಗಳಲ್ಲಿ ಬಳಕೆದಾರರ ಡೇಟಾವನ್ನು ಸಂಗ್ರಹಿಸಲು ವಿಫಲವಾದ ಗೂಗಲ್‌ಗೆ ನ್ಯಾಯಾಂಗ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ವಿದೇಶಿ ತಂತ್ರಜ್ಞಾನವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ವಿಶಾಲ ಪ್ರಯತ್ನಗಳ ಭಾಗವಾಗಿ, ರಷ್ಯಾ ಈ ತಿಂಗಳು ನಾರ್ಡ್ ವಿಪಿಎನ್ ಮತ್ತು ಎಕ್ಸ್‌ಪ್ರೆಸ್ ವಿಪಿಎನ್ ಸೇರಿದಂತೆ ಆರು ಪ್ರಮುಖ ವಿಪಿಎನ್ ಪೂರೈಕೆದಾರರನ್ನು ನಿಷೇಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.