ADVERTISEMENT

ಕೋವಿಡ್ -19 ಎರಡನೇ ಅಲೆ: ಟ್ವೀಟ್‌ಗಳ ಪ್ರಮಾಣ ಶೇ.600 ಕ್ಕಿಂತ ಹೆಚ್ಚು ಏರಿಕೆ

ರಶೀದ್ ಕಪ್ಪನ್
Published 3 ಜುಲೈ 2021, 4:26 IST
Last Updated 3 ಜುಲೈ 2021, 4:26 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ನವದೆಹಲಿ: ದೇಶದಲ್ಲಿ ಕೊರೊನಾ ಹರಡುವಿಕೆ ಉತ್ತುಂಗದಲ್ಲಿದ್ದಾಗ ಈಸಂಬಂಧಿತಟ್ವೀಟ್‌ಗಳ ಪ್ರಮಾಣದಲ್ಲಿ ಶೇ. 600ರಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಏಪ್ರಿಲ್ 1 ರಿಂದ ಮೇ 31 ರವರೆಗೆ ಈ ಹೆಚ್ಚಳ ಕಂಡುಬಂದಿದ್ದು, ಹಿಂದಿನ ಎರಡು ತಿಂಗಳುಗಳಿಗೆ ಹೋಲಿಸಿದರೆ ಏಳು ಪಟ್ಟು ಹೆಚ್ಚಾಗಿದೆ.

ಈ ಬಗ್ಗೆ ಟ್ವಿಟರ್‌ ಕಂಪನಿ ಸಂಶೋಧನೆ ನಡೆಸಿದ್ದು, ಟ್ವೀಟ್‌ಗಳ ಹೋಲಿಕೆ ಮೂಲಕ ವಿಶ್ಲೇಷಣೆ ಮಾಡಿದೆ. ಇದರನ್ವಯ ಎರಡನೇ ಅಲೆ ಬಗ್ಗೆ ಜನರಲ್ಲಿದ್ದ ಕಳವಳ ಮತ್ತು ಆತಂಕ ಸ್ಪಷ್ಟವಾಗಿ ಹೊರಬಿದ್ದಿದೆ. ಹೆಚ್ಚಾದ ಟ್ವೀಟ್‌ಗಳ ಸಂಖ್ಯೆಯು ಸಾಂಕ್ರಾಮಿಕ ಸಂಬಂಧಿತ ಆತಂಕದ ಸೂಚನೆಯಾಗಿತ್ತು. ಕೊರೊನಾ ಉಲ್ಬಣಗೊಂಡ ತಿಂಗಳುಗಳಲ್ಲಿ ಟ್ವೀಟ್‌ಗಳಿಗೆ ಪ್ರತ್ಯುತ್ತರಗಳ ಪ್ರಮಾಣ 1.5 ಪಟ್ಟು ಹೆಚ್ಚಾಗಿದೆ.

ಕೋವಿಡ್ -19 ಲಕ್ಷಣಗಳು, ಚಿಕಿತ್ಸೆ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಟ್ವೀಟ್‌ಗಳೊಂದಿಗೆ ವೈದ್ಯಕೀಯ ಸಹಾಯದ ಕುರಿತಾದ ಟ್ವೀಟ್‌ಗಳ ಸಂಖ್ಯೆ ಶೇ. 1,958 ರಷ್ಟು ಹೆಚ್ಚಾಗಿದೆ.

ADVERTISEMENT

‘ಎರಡನೇ ಅಲರಯ ಸಂದರ್ಭದಲ್ಲಿ #Covid19 ಹ್ಯಾಶ್‌ಟ್ಯಾಗ್ ಅನ್ನು ಶೇ. 77ಕ್ಕೂ ಹೆಚ್ಚು ಟ್ವೀಟ್‌ಗಳಲ್ಲಿ ಬಳಸಲಾಗಿದೆ, ಫೆಬ್ರವರಿ-ಮಾರ್ಚ್ ಅವಧಿಗೆ ಹೋಲಿಸಿದರೆ #Blood ಅನ್ನು ಶೇ. 72ಕ್ಕೂ ಅಧಿಕ ಟ್ವೀಟ್‌ಗಳಿಗೆ ಬಳಕೆ ಮಾಡಲಾಗಿದೆ, # Plasma ಹ್ಯಾಶ್ ಟ್ಯಾಗ್ ಬಳಕೆ ಶೇ. 834 ರಷ್ಟು ಹೆಚ್ಚಳ ಕಂಡಿದೆ. ಇದೇ ಸಮಯದಲ್ಲಿ #SOS ಅನ್ನು ಶೇ. 152ಕ್ಕೂ ಪ್ರಮಾಣದಲ್ಲಿ ಬಳಸಿ ಟ್ವೀಟ್ ಮಾಡಲಾಗಿದೆ,’ ಎಂದು ಟ್ವಿಟರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

‘#Vaccine ಮತ್ತು #Vaccination ಹ್ಯಾಶ್ ಟ್ಯಾಗ್ ಬಳಸಿದ ಟ್ವೀಟ್‌ಗಳು ಶೇ. 246ರಷ್ಟು ಹೆಚ್ಚಾಗಿವೆ. ಈ ಸಂಭಾಷಣೆಯನ್ನು ಬೆಂಬಲಿಸಲು ಟ್ವಿಟರ್, ಅಧಿಕೃತ ಮೂಲಗಳಿಂದ ಲಸಿಕೆಗೆ ಸಂಬಂಧಿತ ಅಪ್‌ಡೇಟ್ಸ್ ಮತ್ತು ಮಾಹಿತಿಯನ್ನು ನೀಡುವ ‘ಹೋಮ್‌ ಟೈಮ್‌ಲೈನ್ ಪ್ರಾಂಪ್ಟ್’ ಅನ್ನು ಪರಿಚಯಿಸಿತು.

ಬಹು ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವ ಮೂಲಕ ಕೋವಿಡ್ ನಿಧಿ ಸಂಗ್ರಹಕ್ಕೆ ಈ ವೇದಿಕೆಯನ್ನು ಬಳಸಲಾಯಿತು. ‘ನಿಧಿಸಂಗ್ರಹ ಸಂಭಾಷಣೆಗಳು ಶೇ. 731 ರಷ್ಟು (ಎಂಟು ಪಟ್ಟು) ಹೆಚ್ಚಾಗಿದೆ. ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮಿನ್ಸ್ ಅವರು ಭಾರತಕ್ಕೆ ತಮ್ಮ ಹಣಕಾಸಿನ ಬೆಂಬಲವನ್ನು ಘೋಷಿಸಿದ ಟ್ವೀಟ್ ಈ ಅವಧಿಯಲ್ಲಿ ಹೆಚ್ಚು ಲೈಕ್ ಗಳಿಸಿದ ಮತ್ತು ರಿಟ್ವೀಟ್ ಆದ ಟ್ವೀಟ್ ಆಗಿದೆ.’

ಮಾನಸಿಕ ಯೋಗಕ್ಷೇಮದ ಕುರಿತಾದ ಟ್ವೀಟ್‌ಗಳು ಅಗ್ರಸ್ಥಾನದಲ್ಲಿವೆ. ಕೊರೊನಾ ಉಲ್ಬಣದ ಸಮಯದಲ್ಲಿ ಈ ಸಂಬಂಧಿತ ಟ್ವೀಟ್‌ಗಳು ಶೇ. 153 ರಷ್ಟು ಹೆಚ್ಚಳವನ್ನು ದಾಖಲಿಸಿವೆ. ‘#DoctorsMentalhealth, #CovidCounselling, #CovidDepression, #CovidInsomnia ಮುಂತಾದ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟ್ವೀಟ್ ಮಾಡಿದ್ದಾರೆ.

#IndiaFightsCorona ಹ್ಯಾಶ್ ಟ್ಯಾಗ್ ಬಳಸಿ ಸ್ಥಳೀಯ ಮತ್ತು ರಾಜ್ಯಕ್ಕೆ ಸಂಬಂಧಿತ ಸಂಭಾಷಣೆಗಳ ಟ್ವೀಟ್‌ಗಳಲ್ಲಿ ಶೇ. 530ರಷ್ಟು ಹೆಚ್ಚಳ ಕಂಡಿದೆ. ‘#DelhiFightsCorona ಮತ್ತು #MaharashtraFightsCorona ಹ್ಯಾಶ್‌ಟ್ಯಾಗ್‌ ಬಳಸಿ ಮಾಡಲಾದ ಟ್ವೀಟ್‌ಗಳಲ್ಲಿ ಗಮನಾರ್ಹ ಏರಿಕೆ ಕಂಡಿದ್ದು, ಕ್ರಮವಾಗಿ ಶೇ. 1,872 ಮತ್ತು ಶೇ. 2,377 ರಷ್ಟು ಹೆಚ್ಚಾಗಿದೆ.’

ಪರಿಣಿತ ಸಂಸ್ಥೆಗಳು, ಅಧಿಕೃತ ಸರ್ಕಾರಿ ಖಾತೆಗಳು, ಆರೋಗ್ಯ ವೃತ್ತಿಪರರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಸೇವೆಗಳ ಜೊತೆಗೆ ಇತ್ತೀಚಿನ ಬೆಳವಣಿಗೆಗಳು, ಅತ್ಯುತ್ತಮ ಕೋವಿಡ್ -19 ಅಭ್ಯಾಸಗಳು, ಲಸಿಕೆ ಅಭಿಯಾನ, ಮತ್ತು ಇತರ ಸಂಬಂಧಿತ ಮಾಹಿತಿಯ ಬಗ್ಗೆ ನಿಖರವಾದ ಮಾಹಿತಿಯನ್ನು ಕಂಡುಹಿಡಿಯಲು ಟ್ವೀಟ್‌ ಬಳಕೆ ಮಾಡಿದ್ದಾರೆ. #CoronavirusUpdates, #CoronaIndiaUpdate, #Covid19IndiaResources ಇತರೆ ಹ್ಯಾಶ್‌ಟ್ಯಾಗ್ ಬಳಸಿದ ಟ್ವೀಟ್ ಸಂಭಾಷಣೆಗಳು ಶೇ. 916 ರಷ್ಟು ಹೆಚ್ಚಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.