ADVERTISEMENT

ಟ್ವಿಟರ್ ಬ್ಲೂ ಟಿಕ್: ಎಡವಟ್ಟು ಮಾಡಿಕೊಂಡ ಕಂಪನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2021, 9:09 IST
Last Updated 16 ಆಗಸ್ಟ್ 2021, 9:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಟ್ವಿಟರ್‌ನಲ್ಲಿ ಜನಪ್ರಿಯ ವ್ಯಕ್ತಿಗಳಿಗೆ ನೀಡಲಾಗುವ ‘ವೆರಿಫೈಡ್ ಬ್ಯಾಡ್ಜ್’ ಪ್ರಕ್ರಿಯೆಯನ್ನು ಸಂಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಕೆಲವೊಂದು ಖಾತೆಗಳಿಗೆ ಸ್ವಯಂಚಾಲಿತವಾಗಿ ವೆರಿಫೈಡ್ ಬ್ಯಾಡ್ಜ್ ‘ಬ್ಲೂ ಟಿಕ್’ ದೊರೆತಿದೆ. ಅಲ್ಲದೆ, ಅದು ತಾಂತ್ರಿಕ ದೋಷದಿಂದ ಉಂಟಾಗಿದ್ದು, ಅಂತಹ ಖಾತೆಗಳನ್ನು ಸರಿಪಡಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

ಕಳೆದ ತಿಂಗಳು ಟ್ವಿಟರ್, ಕೆಲವೊಂದು ನಕಲಿ ಖಾತೆಗಳನ್ನು ಸ್ಥಗಿತಗೊಳಿಸಿತ್ತು. ಅಲ್ಲದೆ, ಮತ್ತೆ ಉಳಿದ ನಕಲಿ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ.

ADVERTISEMENT

ಜತೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಟ್ವಿಟರ್ ವೆರಿಫಿಕೇಶನ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಅಲ್ಲದೆ, ಸಮಸ್ಯೆ ಸರಿಪಡಿಸಿದ ಬಳಿಕ, ಟ್ವಿಟರ್ ಖಾತೆ ವೆರಿಫೈ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.