ADVERTISEMENT

ಮಕ್ಕಳಿಗೆ ಆಜಾನ್ ಬಗ್ಗೆ ಹೇಳಿಕೊಟ್ಟು ನೆಟ್ಟಿಗರ ಮನಗೆದ್ದ ಬಾಲಿವುಡ್ ನಟ ಕರಣ್‌ವೀರ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 3:31 IST
Last Updated 27 ಏಪ್ರಿಲ್ 2020, 3:31 IST
ರಯಾ ಬೆಲ್ಲಾ
ರಯಾ ಬೆಲ್ಲಾ   

ಬಾಲಿವುಡ್‌ ನಟ ಕರಣ್‌ವೀರ್‌ ಬೋಹ್ರಾ ಅವರು ತಮ್ಮ ಮಕ್ಕಳೊಂದಿಗೆ ‘ಆಜಾನ್‌’ ಕುರಿತು ಮಾತನಾಡಿರುವ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ಮನಗೆದ್ದಿದ್ದಾರೆ. ಮಸೀದಿಗಳಲ್ಲಿ ಪ್ರತಿದಿನ ಕೂಗುವ ಆಜಾನ್‌ (ಪ್ರಾರ್ಥನೆ) ಬಗ್ಗೆ ಮಕ್ಕಳಿಗೆ ಹೇಳಿಕೊಡುವುದು ಮತ್ತು ಎಲ್ಲರಿಗೂ ರಂಜಾನ್‌ ಶುಭ ಕೋರುವಂತೆ ತಿಳಿಸಿರುವುದು ವಿಡಿಯೊದಲ್ಲಿದೆ.

ದೂರದಲ್ಲಿ ಕೂಗುತ್ತಿರುವ ಆಜಾನ್‌ ಶಬ್ದ ತಮ್ಮ ಮನೆಯವರೆಗೂ ಕೇಳಿಸುತ್ತಿರುವುದನ್ನು ಗಮನಿಸಿದಬೋಹ್ರಾ, ಏನದು? ಎಂದು ಮಕ್ಕಳನ್ನು ಕೇಳಿದ್ದಾರೆ. ಅದಕ್ಕೆ ಮುದ್ದಾಗಿ ಉತ್ತರಿಸುವ ದೊಡ್ಡ ಮಗಳು ವಿಯನ್ನಾ, ‘ಅಜಾನ್’‌ ಎನ್ನುತ್ತಾಳೆ. ಚಿಕ್ಕ ಮಗಳು ರಯಾ ಬೆಲ್ಲಾಳಿಗೂ ಅದನ್ನು ಹೇಳಿಕೊಡುವ ಬೋಹ್ರಾ, ಆಜಾನ್‌ ಎಂದರೇನೆಂದು ವಿವರಿಸಿದ್ದಾರೆ. ಮುಸಲ್ಮಾನರು ಪ್ರತಿದಿನ ಐದು ಬಾರಿ ಆಜಾನ್‌ ಕೂಗುತ್ತಾರೆ ಎಂದು ಹೇಳಿಕೊಟ್ಟಿದ್ದಾರೆ. ನಂತರ ಎಲ್ಲರಿಗೂ ರಂಜಾನ್‌ ಶುಭ ಕೋರುವಂತೆ ತಿಳಿಸಿದ್ದಾರೆ.

ಈ ವಿಡಿಯೊ ಜೊತೆಗೆ ಅವರು, ‘ನಾವಿರುವ ಕಟ್ಟಡದಿಂದಲೇ ಪ್ರತಿದಿನ ಆಜಾನ್‌ ಕೇಳಿಸಿಕೊಳ್ಳುತ್ತೇವೆ. ನನ್ನ ಮಕ್ಕಳು ಮೊದಲಸಲ ಅದನ್ನು ಕೇಳಿಸಿಕೊಂಡಾಗ ಏನದು? ಎಂದು ಪ್ರಶ್ನಿಸಿದರು. ಅದನ್ನು ಆಜಾನ್‌ ಎನ್ನುತ್ತಾರೆ ಎಂದು ತಿಳಿಸಿ, ಮಹತ್ವವನ್ನು ವಿವರಿಸಿದ್ದೇವೆ. ಪ್ರಪಂಚದ ಯೋಗಕ್ಷೇಮಕ್ಕಾಗಿ ಎಲ್ಲರೂ ಪ್ರಾರ್ಥಿಸೋಣ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಶನಿವಾರ ಹಂಚಿಕೆಯಾಗಿರುವ ಈ ವಿಡಿಯೊವನ್ನು 3.8 ಸಾವಿರಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ. 800ಕ್ಕೂ ಹೆಚ್ಚು ಮಂದಿ ಹಂಚಿಕೊಂಡಿದ್ದಾರೆ.

ಪ್ರಪಂಚದಾದ್ಯಂತ ಇರುವ ಮುಸ್ಲೀಮರು ರಂಜಾನ್‌ ಆಚರಿಸುವ ಪವಿತ್ರ ಮಾಸ ಇದಾಗಿದ್ದು, ಸದ್ಯ ಎಲ್ಲೆಡೆ ಕೋವಿಡ್‌–19 ಭೀತಿಯಿಂದಾಗಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಸಾರ್ವಜನಿಕ ಆಚರಣೆಗೆ ತೊಡಕಾಗಿದೆ. ಎಲ್ಲರೂ ತಮ್ಮತಮ‌್ಮ ಮನೆಗಳಲ್ಲಿಯೇ ರಂಜಾನ್‌ ಆಚರಿಸುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.