ADVERTISEMENT

ವಾಟ್ಸ್ಆ್ಯಪ್‌ನಲ್ಲಿ ಬಂತು ಹೊಸ ವೈಶಿಷ್ಟ್ಯ: ಕರೆ ಮಾಡುವವರಿಗೆ ಅನುಕೂಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2021, 9:03 IST
Last Updated 22 ಜುಲೈ 2021, 9:03 IST
ವಾಟ್ಸ್ಆ್ಯಪ್ ನೂತನ ಅಪ್‌ಡೇಟ್ (ಪ್ರಾತಿನಿಧಿಕ ಚಿತ್ರ)
ವಾಟ್ಸ್ಆ್ಯಪ್ ನೂತನ ಅಪ್‌ಡೇಟ್ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಜನಪ್ರಿಯ ಸಾಮಾಜಿಕ ತಾಣ ವಾಟ್ಸ್‌ಆ್ಯಪ್, ಐಫೋನ್ ಬಳಕೆದಾರರಿಗೆ ನೂತನ ಅಪ್‌ಡೇಟ್ ಬಿಡುಗಡೆ ಮಾಡಿದೆ.

ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡುವವರಿಗೆ ಹೊಸ ಫೀಚರ್‌ನಿಂದ ಹೆಚ್ಚಿನ ಅನುಕೂಲವಾಗಲಿದೆ.

ಐಫೋನ್‌ ಬಳಕೆದಾರರಿಗೆ ವಾಟ್ಸ್‌ಆ್ಯಪ್ ಅಪ್ಲಿಕೇಶನ್‌ನಲ್ಲಿ ಹೊಸ ಅಪ್‌ಡೇಟ್ ಜತೆಗೆ ನೂತನ ಸ್ಕ್ರೀನ್ ಕೂಡ ಕಾಣಿಸಿಕೊಳ್ಳುತ್ತಿದೆ. ವಾಟ್ಸ್‌ಆ್ಯಪ್ ಕರೆಯ ಹೋಮ್ ಸ್ಕ್ರೀನ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ಇಂಟರ್‌ಫೇಸ್, ಆ್ಯಪಲ್ ಫೇಸ್‌ಟೈಮ್ ರೂಪದಲ್ಲಿದೆ.

ADVERTISEMENT

ಬಳಕೆದಾರರು ಗ್ರೂಪ್ ಕರೆ ಮಾಡುವಾಗ ಇಲ್ಲದೆ, ವೈಯಕ್ತಿಕ ಕರೆ ಮಾಡುವಾಗ ಮತ್ತೊಬ್ಬರನ್ನು ಸೇರಿಸಿಕೊಳ್ಳುವ ಆಯ್ಕೆಯನ್ನು ವಾಟ್ಸ್‌ಆ್ಯಪ್ ಮೊದಲೇ ಪರಿಚಯಿಸಿತ್ತು. ಆದರೆ, ಈಗ ಹೆಚ್ಚುವರಿಯಾಗಿ, ಕರೆ ಮಾಡುವ ಸಂದರ್ಭ, ಅವರು ಸ್ವೀಕರಿಸದೇ ಇದ್ದರೂ, ಮತ್ತೆ ಕರೆ ಚಾಲೂ ಇದ್ದರೆ ಅಲ್ಲಿ ಸೇರಿಕೊಳ್ಳಬಹುದು. ಅವರಿಗೆ ಮತ್ತೆ ಪ್ರತ್ಯೇಕವಾಗಿ ಕರೆ ಮಾಡಿ ಸೇರಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲಿಯೇ ಇರುವ ಆಯ್ಕೆಯನ್ನು ಬಳಸಿಕೊಂಡು ಕರೆಯಲ್ಲಿ ಸೇರಿಕೊಳ್ಳುವ ಆಯ್ಜೆಯಿದೆ.

ಆಂಡ್ರಾಯ್ಡ್ ಬಳಕೆದಾರರಿಗೆ ಈ ಹೊಸ ಆಯ್ಕೆ ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.