ADVERTISEMENT

ಖಾಸಗಿತನ ನೀತಿ ಉಲ್ಲಂಘನೆ: ವಾಟ್ಸ್‌ಆ್ಯಪ್‌ಗೆ ₹1,952.87 ಕೋಟಿ ದಂಡ!

ಏಜೆನ್ಸೀಸ್
Published 3 ಸೆಪ್ಟೆಂಬರ್ 2021, 5:27 IST
Last Updated 3 ಸೆಪ್ಟೆಂಬರ್ 2021, 5:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಡಬ್ಲಿನ್: ಯುರೋಪಿಯನ್ ಒಕ್ಕೂಟಗಳ ದತ್ತಾಂಶ ಖಾಸಗಿತನ ನೀತಿಯನ್ನು ಉಲ್ಲಂಘಿಸಿರುವ ವಾಟ್ಸ್ಆ್ಯಪ್‌ಗೆ 22.5 ಕೋಟಿ ಯೂರೋ (ಅಂದಾಜು ₹1,952.87 ಕೋಟಿ) ದಂಡ ವಿಧಿಸಲಾಗಿದೆ.

ಐರ್ಲೆಂಡ್‌ನ ದತ್ತಾಂಶ ಭದ್ರತಾ ಸಮಿತಿ (ಡಿಪಿಸಿ) ಸೂಚನೆಯಂತೆ, ವಾಟ್ಸ್ಆ್ಯಪ್‌ಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.

ಖಾಸಗಿತನ ನೀತಿಯನ್ನು ಉಲ್ಲಂಘಿಸಿದ ಆರೋಪ ವಾಟ್ಸ್ಆ್ಯಪ್ ಮೇಲಿದೆ.

ADVERTISEMENT

ಐರ್ಲೆಂಡ್ ದತ್ತಾಂಶ ಭದ್ರತಾ ಸಮಿತಿ, ಕಂಪನಿಯೊಂದಕ್ಕೆ ವಿಧಿಸಿರುವ ದೊಡ್ಡ ಮೊತ್ತದ ದಂಡ ಇದಾಗಿದೆ.

ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಯುರೋಪಿಯನ್ ರಾಷ್ಟ್ರಗಳಲ್ಲಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಐರ್ಲೆಂಡ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ.

ದಂಡ ವಿಧಿಸಿರುವುದಕ್ಕೆ ವಾಟ್ಸ್ಆ್ಯಪ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದೆ. ಅಲ್ಲದೆ, ವಾಟ್ಸ್ಆ್ಯಪ್ ಸದಾ ಸುರಕ್ಷಿತ ಮತ್ತು ಖಾಸಗಿತನ ಸಹಿತ ಸೇವೆಯನ್ನು ನೀಡುತ್ತದೆ ಎಂದು ಕಂಪನಿ ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.