ADVERTISEMENT

‘ಸೂಪರ್ ಥ್ಯಾಂಕ್ಸ್’ – ಹಣ ಗಳಿಕೆಗೆ ಇನ್ನೊಂದು ಆಯ್ಕೆ ನೀಡಿದ ಯೂಟ್ಯೂಬ್

ರಾಯಿಟರ್ಸ್
Published 21 ಜುಲೈ 2021, 9:41 IST
Last Updated 21 ಜುಲೈ 2021, 9:41 IST
ಚಿತ್ರ ಕೃಪೆ – ರಾಟಯಿರ್ಸ್
ಚಿತ್ರ ಕೃಪೆ – ರಾಟಯಿರ್ಸ್   

ವಿಡಿಯೊ ಕ್ರಿಯೇಟರ್‌ಗಳ ಹಣ ಗಳಿಕೆಗೆ ಮತ್ತೊಂದು ಫೀಚರ್‌ ಅನ್ನು ಯೂಟ್ಯೂಬ್ ಮಂಗಳವಾರ ಪರಿಚಯಿಸಿದೆ. ‘ಸೂಪರ್‌ ಥ್ಯಾಂಕ್ಸ್‌’ ಹೆಸರಿನ ಫೀಚರ್ ಮೂಲಕ ಮತ್ತಷ್ಟು ಕಂಟೆಂಟ್ ಮೇಕರ್‌ಗಳನ್ನು ಸೆಳೆಯಲು ಕಂಪನಿ ಮುಂದಾಗಿದೆ.

ಕಿರು ವಿಡಿಯೊ ಆ್ಯಪ್‌ಗಳಾದ ಟಿಕ್‌ಟಾಕ್, ‘ಫೇಸ್‌ಬುಕ್‌ ಇಂಕ್‌’ನ ಇನ್‌ಸ್ಟಾಗ್ರಾಂಗಳು ವೈರಲ್ ವಿಡಿಯೊ ಕ್ರಿಯೇಟರ್‌ಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದು, ಈ ಸ್ಪರ್ಧೆ ಎದುರಿಸಲು ಯೂಟ್ಯೂಬ್ ಕೂಡ ಹೊಸ ಫೀಚರ್ ಪರಿಚಯಿಸಿದೆ.

ನಿರ್ದಿಷ್ಟ ಯೂಟ್ಯೂಬ್‌ ಚಾನೆಲ್‌ನ ಅಭಿಮಾನಿಗಳು ನಿರ್ದಿಷ್ಟ ದರ ಪಾವತಿಸಿ ‘ಸೂಪರ್‌ ಥ್ಯಾಂಕ್ಸ್‌’ ಫೀಚರ್ ಖರೀದಿ ಮಾಡಬಹುದಾಗಿದೆ. 2 ಡಾಲರ್‌ಗಳಿಂದ 50 ಡಾಲರ್‌ ವರೆಗೆ ನಾಲ್ಕು ದರ ನಿಗದಿಪಡಿಸಲಾಗಿದೆ. ‘ಸೂಪರ್‌ ಥ್ಯಾಂಕ್ಸ್‌’ ಫೀಚರ್ ಖರೀದಿ ಮಾಡುವ ಮೂಲಕ ಜನರು ತಮ್ಮ ನೆಚ್ಚಿನ ಯೂಟ್ಯೂಬ್ ಚಾನೆಲ್‌ಗೆ ಕೃತಜ್ಞತೆ ಮತ್ತು ಬೆಂಬಲ ಸೂಚಿಸಬಹುದು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ADVERTISEMENT

ಖರೀದಿ ಮಾಡಿದವರ ಪ್ರತಿಕ್ರಿಯೆಗಳು ಕಮೆಂಟ್‌ ಜಾಗದಲ್ಲಿ ಹೈಲೈಟ್ ಆಗಿ ಕಾಣಿಸಲಿದೆ. ಇದರಿಂದ ವಿಡಿಯೊ ಕ್ರಿಯೇಟರ್ ಕೂಡ ಅಭಿಮಾನಿಗಳ ಮೆಚ್ಚುಗೆಗೆ ಸುಲಭವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಬಹುದಾಗಿದೆ.

68 ದೇಶಗಳ ಸಾವಿರಾರು ಕ್ರಿಯೇಟರ್‌ಗಳಿಗೆ ಈ ಆಯ್ಕೆ ಲಭ್ಯವಿದೆ. ಯೂಟ್ಯೂಬ್‌ನ ಸಹಭಾಗಿತ್ವ ಕಾರ್ಯಕ್ರಮದ ಅಡಿಯಲ್ಲಿ ಎಲ್ಲ ಅರ್ಹ ಕ್ರಿಯೇಟರ್‌ಗಳಿಗೆ ಈ ಫೀಚರ್ ವಿಸ್ತರಣೆಯಾಗಲಿದೆ.

ಅಭಿಮಾನಿಗಳು ಎಕ್ಸ್‌ಕ್ಲೂಸಿವ್ ಕಂಟೆಂಟ್‌ಗಳಿಗೆ ಚಾನೆಲ್ ಸದಸ್ಯತ್ವದ ಮೂಲಕ ಪಾವತಿ ಮಾಡಬಹುದಾಗಿದೆ. ಯೂಟ್ಯೂಬ್‌ನಲ್ಲಿ ಲೈವ್‌ಸ್ಟ್ರೀಮ್ ಆಗುತ್ತಿರುವ ವಿಡಿಯೊದಲ್ಲಿ ತಮ್ಮ ಕಮೆಂಟ್‌ಗಳನ್ನು ಕಮೆಂಟ್ ವಿಭಾಗದ ಮೇಲ್ಭಾಗಕ್ಕೆ ಪಿನ್ ಮಾಡುವುದಕ್ಕಾಗಿ ‘ಸೂಪರ್ ಚಾಟ್‌’ ಹಣ ಪಾವತಿಗೂ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.