ADVERTISEMENT

ಸಾಫ್ಟ್‌ವೇರ್‌ ಅಪ್‌ಡೇಟ್‌: ಆ್ಯಪಲ್‌ ತೆಕ್ಕೆಗೆ ಫ್ಲೀಟ್‌ಸ್ಮಿತ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 8:48 IST
Last Updated 25 ಜೂನ್ 2020, 8:48 IST
ಆ್ಯಪಲ್‌ ಕಂಪನಿ– ಸಂಗ್ರಹ ಚಿತ್ರ
ಆ್ಯಪಲ್‌ ಕಂಪನಿ– ಸಂಗ್ರಹ ಚಿತ್ರ   

ಮೊಬೈಲ್‌, ಲ್ಯಾಪ್‌ಟಾಪ್‌ ಮತ್ತು ಗ್ಯಾಜೆಟ್‌ಗಳ ಸಾಫ್ಟವೇರ್‌ ಅಪ್‌ಡೇಟ್‌ನಲ್ಲಿ ತೊಡಗಿರುವ ‌ಜಾಗತಿಕ‌ ಕಂಪನಿ ಆ್ಯಪಲ್‌, ಆ ಕೆಲಸಕ್ಕಾಗಿ ಮತ್ತೊಂದು ಸ್ಟಾರ್ಟ್ಅಪ್‌ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಸಾಫ್ಟ್‌ವೇರ್‌ ರಕ್ಷಣಾ ತಂತ್ರಾಂಶ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಸ್ಯಾನ್‌ ಫ್ರಾನ್ಸಿಸ್ಕೊ ಮೂಲದ ಫ್ಲೀಟ್‌ಸ್ಮಿತ್‌ ಸಾಫ್ಟ್‌ವೇರ್‌ ನವೋದ್ಯಮ ಆ್ಯಪಲ್‌ನಲ್ಲಿ ವಿಲೀನವಾಗಿದೆ. ವಿಲೀನ ಪ್ರಕ್ರಿಯನ್ನು ಎರಡೂ ಕಂಪನಿಗಳು ಖಚಿತಪಡಿಸಿವೆ. ಆ್ಯಪಲ್‌ ಎಷ್ಟು ಮೊತ್ತ ಪಾವತಿಸಿದೆ ಎಂಬ ಮಾಹಿತಿಯನ್ನು ರಹಸ್ಯವಾಗಿಡಲಾಗಿದೆ.

ಆ್ಯಪಲ್‌ ಜನಪ್ರಿಯ ಉತ್ಪನ್ನಗಳಾದ ಮ್ಯಾಕ್‌, ಐಪಾಡ್ ಮತ್ತು ಐಫೋನ್‌ಗಳ‌ ಫ್ಯೂಚರ್ ಮತ್ತು ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸುವ ಕೆಲಸಕ್ಕೆ ಫ್ಲೀಟ್‌ಸ್ಮಿತ್ ಕೈಜೋಡಿಸಲಿದೆ. ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ನೈಪುಣ್ಯ ಸಾಧಿಸಿರುವ ಫ್ಲೀಟ್‌ಸ್ಮಿತ್,‌ ಆ ತಂತ್ರಜ್ಞಾನವನ್ನು ಆ್ಯಪಲ್‌ ಉತ್ಪನ್ನಗಳಲ್ಲಿ ಅಳವಡಿಸಲಿದೆ.

ADVERTISEMENT

ಮೈಕ್ರೋಸಾಫ್ಟ್‌ ಮತ್ತು ವಿಎಂವೇರ್‌ ಕಂಪನಿಗಳಿಂದ ಎದುರಾಗಿರುವ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಆ್ಯಪಲ್‌ ತನ್ನ ಐ.ಟಿ ಉತ್ಪನ್ನ ಮತ್ತು ಗ್ಯಾಜೆಟ್‌ ತಂತ್ರಜ್ಞಾನ ಅಪ್‌ಡೇಟ್‌ನಲ್ಲಿ ತೊಡಗಿದೆ.

'big sur'‌ ಸೂಟ್ ಹೆಸರಿನಲ್ಲಿ ಒಎಸ್‌’, ಐಒಎಸ್‌ 14, ವಾಚ್‌ ಒಎಸ್7, ಐಪಾಡ್‌ಒಎಸ್‌ 14, ಮ್ಯಾಕ್‌ಒಎಸ್ ಸಾಫ್ಟ್‌ವೇರ್‌‌ಗಳನ್ನು ಅಪ್‌ಡೇಟ್‌ ಮಾಡುವ ದೊಡ್ಡ ಯೋಜನೆಯನ್ನು ಆ್ಯಪಲ್‌ ಈಗಾಗಲೇ ಕೈಗೆತ್ತಿಕೊಂಡಿದೆ. ಮ್ಯಾಕ್‌ ಬುಕ್‌ಗಳಿಗಾಗಿ ಸ್ವಂತ ಪ್ರೊಸೆಸರ್‌ ಅಭಿವೃದ್ಧಿಯಲ್ಲಿ ತೊಡಗಿರುವುದಾಗಿ ಆ್ಯಪಲ್‌ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.