ADVERTISEMENT

WWDC21: ಆ್ಯಪಲ್ ಸಮಾವೇಶ ಈ ಬಾರಿಯೂ ಆನ್‌ಲೈನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2021, 16:16 IST
Last Updated 30 ಮಾರ್ಚ್ 2021, 16:16 IST
ಆ್ಯಪಲ್ ಡೆವಲಪರ್ ಸಮಾವೇಶ
ಆ್ಯಪಲ್ ಡೆವಲಪರ್ ಸಮಾವೇಶ   

ಕ್ಯಾಲಿಫೋರ್ನಿಯಾ: ಈ ಬಾರಿಯೂ ವಿಶ್ವ ಡೆವಲಪರ್‌ಗಳ ವಾರ್ಷಿಕ ಸಮಾವೇಶವನ್ನು ಆನ್‌ಲೈನ್ ಮೂಲಕವೇ ನಡೆಸುವುದಾಗಿ ಆ್ಯಪಲ್ ಮಂಗಳವಾರ ಘೋಷಿಸಿದೆ.

ಜೂನ್ 7ರಿಂದ ಆರಂಭವಾಗುವ WWDC21 ಸಮಾವೇಶ, ಜೂನ್ 11ರವರೆಗೆ ನಡೆಯಲಿದೆ. ಕಳೆದ ಬಾರಿ ಆ್ಯಪಲ್ ಡೆವಲಪರ್ ಸಮಾವೇಶ, ಕೋವಿಡ್‌ನಿಂದಾಗಿ ಆನ್‌ಲೈನ್‌ಗೆ ಮಾತ್ರ ಸೀಮಿತವಾಗಿತ್ತು. ಈ ಬಾರಿಯೂ ಆನ್‌ಲೈನ್ ಮೂಲಕವೇ ನಡೆಯಲಿದೆ ಎಂದು ಆ್ಯಪಲ್ ಹೇಳಿದೆ.

ಆ್ಯಪ್ ಮತ್ತು ಪ್ರೋಗ್ರಾಂ ಡೆವಲಪರ್ಸ್‌‌ಗೆ ಈ ಸಮಾವೇಶಕ್ಕೆ ಮುಕ್ತ ಪ್ರವೇಶವನ್ನು ಆ್ಯಪಲ್ ಕಲ್ಪಿಸುತ್ತಿದೆ. ಈ ಬಾರಿಯ WWDC21 ಸಮಾವೇಶದಲ್ಲಿ ಹೊಸ ಐಓಎಸ್, ಐಪ್ಯಾಡ್‌ಓಎಸ್, ಮ್ಯಾಕ್‌ ಓಎಸ್, ವಾಚ್ ಓಎಸ್ ಮತ್ತು ಟಿವಿಓಎಸ್ ಅನಾವರಣಗೊಳ್ಳಲಿದೆ.

ADVERTISEMENT

ಹೊಸ ತಂತ್ರಜ್ಞಾನ, ನೂತನ ಸಾಧ್ಯತೆಗಳು ಮತ್ತು ಅವಿಷ್ಕಾರಗಳ ಕುರಿತು ತಿಳಿದುಕೊಳ್ಳಲು, ಚರ್ಚಿಸಲು, ಹೊಸ ಆ್ಯಪ್ ಮತ್ತು ಗೇಮ್‌ಗಳ ಬಗ್ಗೆ ಅರಿತುಕೊಳ್ಳಲು WWDC21 ಸಮಾವೇಶ ಅನುವು ಮಾಡಿಕೊಡಲಿದೆ.

ಅಲ್ಲದೆ, ವಿದ್ಯಾರ್ಥಿಗಳಿಗೂ ಆ್ಯಪಲ್ ಸ್ವಿಫ್ಟ್ ಸ್ಟೂಡೆಂಟ್ ಚಾಲೆಂಜ್ ಕಾರ್ಯಕ್ರಮ ಪರಿಚಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.