ADVERTISEMENT

ಅಂಚೆ ಇಲಾಖೆಯಿಂದ 'ಡಾಕ್‌ಪೇ' ಡಿಜಿಟಲ್‌ ಪಾವತಿ ಆ್ಯಪ್‌ ಬಿಡುಗಡೆ

ಏಜೆನ್ಸೀಸ್
Published 15 ಡಿಸೆಂಬರ್ 2020, 16:46 IST
Last Updated 15 ಡಿಸೆಂಬರ್ 2020, 16:46 IST
ಡಿಜಿಟಲ್‌ ಪಾವತಿ ಆ್ಯಪ್‌ 'ಡಾಕ್‌ಪೇ'
ಡಿಜಿಟಲ್‌ ಪಾವತಿ ಆ್ಯಪ್‌ 'ಡಾಕ್‌ಪೇ'    
""

ನವದೆಹಲಿ: ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ) ಹೊಸ ಡಿಜಿಟಲ್‌ ಪಾವತಿ ಆ್ಯಪ್‌ 'ಡಾಕ್‌ಪೇ' ಅನಾವರಣಗೊಳಿಸಿವೆ.

ಭಾರತದಾದ್ಯಂತ ಡಿಜಿಟಲ್‌ ಹಣಕಾಸು ವ್ಯವಸ್ಥೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಆ್ಯಪ್‌ ಬಿಡುಗಡೆ ಮಾಡಲಾಗಿದೆ. ಹಣ ವರ್ಗಾವಣೆ, ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿ, ಖರೀದಿ ಹಾಗೂ ಸೇವೆಗಳಲ್ಲಿ ವರ್ಚುವಲ್‌ ಡೆಬಿಟ್ ಕಾರ್ಡ್‌ ಮತ್ತು ಯುಪಿಐ ಬಳಸಿ ಪಾವತಿಸುವುದು, ಯಾವುದೇ ಬ್ಯಾಂಕ್‌ ಗ್ರಾಹಕರಿಗೆ ಬ್ಯಾಂಕಿಂಗ್‌ ಸೇವೆ ಹಾಗೂ ಬಿಲ್‌ ಪಾವತಿ ಸೇವೆಗಳು ಈ ಆ್ಯಪ್‌ ಮೂಲಕ ಸಿಗಲಿದೆ.

ಪ್ರಸ್ತುತ ಆ್ಯಂಡ್ರಾಯ್ಡ್‌ ವೇದಿಕೆಯಲ್ಲಿ ಅಪ್ಲಿಕೇಷನ್‌ ಲಭ್ಯವಿದ್ದು, ಐಒಎಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಅಂಚೆ ಇಲಾಖೆ ಟ್ವೀಟಿಸಿದೆ.

ADVERTISEMENT

ಕೇಂದ್ರ ದೂರಸಂಪರ್ಕ ಮತ್ತು ಐಟಿ ಸಚಿವ ರವಿ ಶಂಕರ್‌ ಪ್ರಸಾದ್‌ 'ಡಾಕ್‌ಪೇ' ಬಿಡುಗಡೆಯನ್ನು ಮಂಗಳವಾರ ಘೋಷಿಸಿದರು. 'ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಅವಧಿಯಲ್ಲಿ ಭಾರತೀಯ ಅಂಚೆ ಡಿಜಿಟಲ್‌ ಹಾಗೂ ಭೌತಿಕ ವಿಧಾನದಲ್ಲಿ ಹಲವು ರೀತಿಯ ಪೋಸ್ಟಲ್‌ ಸೇವೆಗಳನ್ನು ನೀಡಿತು. ಈ ಅತ್ಯಾಧುನಿಕ ಸೇವೆಯು ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್‌ ಸೇವೆಗಳು ಮತ್ತು ಅಂಚೆ ಸೇವೆಗಳನ್ನು ನೀಡುವ ಜೊತೆಗೆ ಅಂಚೆ ಹಣಕಾಸು ಸೇವೆಗಳನ್ನು ಮನೆಬಾಗಿಲಿನಲ್ಲಿ ಪಡೆಯಬಹುದಾಗಿದೆ' ಎಂದಿದ್ದಾರೆ.

'ಪ್ರತಿ ಭಾರತೀಯರ ಹಣಕಾಸು ಅಗತ್ಯಗಳಿಗೆ ಡಾಕ್‌ ಪೇ ದೇಶೀಯ ಪರಿಹಾರವಾಗಿದೆ' ಎಂದು ಐಪಿಪಿಬಿ ಮಂಡಳಿಯ ಮುಖ್ಯಸ್ಥ ಪ್ರದಿಪ್ತ ಕುಮಾರ್‌ ಬಿಸೋಯಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.