ADVERTISEMENT

Google Doodle: ಕೊರೊನಾ ತಡೆಗೆ ಮಾಸ್ಕ್‌ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 7:29 IST
Last Updated 6 ಏಪ್ರಿಲ್ 2021, 7:29 IST
ಗೂಗಲ್ ಡೂಡಲ್
ಗೂಗಲ್ ಡೂಡಲ್   

ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಮೂಲಕ ಕೋವಿಡ್–19 ಸೋಂಕು ಹರಡುವಿಕೆ ತಡೆಗೆ ಮುಂದಾಗಬೇಕು ಎಂಬುದನ್ನು ಡೂಡಲ್ ಮೂಲಕ ಗೂಗಲ್ ಸಾರಿ ಹೇಳಿದೆ.

ಇಂದು (ಏಪ್ರಿಲ್ 6) ಮಾಸ್ಕ್ ಧರಿಸಿರುವ ಡೂಡಲ್‌ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಗೂಗಲ್ ಮುಂದಾಗಿದೆ. ಜತೆಗೆ ಜನರು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ‘ಗೂಗಲ್ ಡೂಡಲ್ಸ್’ ಟ್ವೀಟ್‌ ಮಾಡಿದೆ.

‘ಮಾಸ್ಕ್ ಧರಿಸುವುದು ಈಗಲೂ ಬಹುಮುಖ್ಯ. ಮಾಸ್ಕ್ ಧರಿಸಿ ಜೀವ ಉಳಿಸಿ. ಜಾಗತಿಕ ಸಮುದಾಯಗಳ ಮೇಲೆ ಕೋವಿಡ್ ಪರಿಣಾಮ ಬೀರುತ್ತಿದೆ. ಸೋಂಕು ಹರಡುವಿಕೆ ತಡೆಗೆ ಸಹಾಯ ಮಾಡಬೇಕಿದೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ, ಮಾಸ್ಕ್ ಧರಿಸಿ, ಕೈಗಳನ್ನು ತೊಳೆಯುತ್ತಿರಿ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದೆ.

ADVERTISEMENT

ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಗೂಗಲ್ ಡೂಡಲ್ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ. ದೇಶದಲ್ಲಿ ಮಂಗಳವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ 96,982 ಪ್ರಕರಣ ವರದಿಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 1.26 ಕೋಟಿ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.