ADVERTISEMENT

ನಿಮ್ಮ ಆಧಾರ್ ಕಾರ್ಡ್ ಅಧಿಕೃತವೇ? ಪರಿಶೀಲಿಸುವುದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2021, 11:07 IST
Last Updated 29 ಜುಲೈ 2021, 11:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಆಧಾರ್ ಕಾರ್ಡ್ ಎನ್ನುವುದು ಇಂದು ಹಲವು ಅಗತ್ಯಗಳಿಗೆ ಬೇಕಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳು, ಸಬ್ಸಿಡಿ ಇತ್ಯಾದಿ ಕೆಲಸಗಳಿಗೆ ಆಧಾರ್ ಸಲ್ಲಿಸುವುದು ಕೂಡ ಕಡ್ಡಾಯವಾಗಿದೆ.

ಬ್ಯಾಂಕ್, ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಸಹಾಯಧನ, ಲಸಿಕೆ ಹೀಗೆ ಹಲವು ಸಂದರ್ಭದಲ್ಲಿ ಆಧಾರ್ ಮುಖ್ಯವಾಗುತ್ತದೆ. ಆದರೆ ಕೆಲವೊಮ್ಮೆ ನಕಲಿ ಆಧಾರ್ ಸಲ್ಲಿಕೆಯಂತಹ ಪ್ರಕರಣ ಕೂಡ ವರದಿಯಾಗುತ್ತದೆ.

ಆಧಾರ್ ಕಾರ್ಡ್‌ನ ನೈಜತೆ ಪತ್ತೆ ಹಚ್ಚುವುದು ಹೇಗೆ ಮತ್ತು ಅದಕ್ಕಿರುವ ಅಧಿಕೃತ ಸುಲಭ ಕ್ರಮ ಯಾವುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ADVERTISEMENT

ಮೊದಲು, ಬ್ರೌಸರ್‌ನಲ್ಲಿ https://resident.uidai.gov.in/verify ಎನ್ನುವ ಪುಟಕ್ಕೆ ಭೇಟಿ ನೀಡಬೇಕು.

ನಂತರ ಅಲ್ಲಿ, ಯಾವ ಆಧಾರ್ ಸಂಖ್ಯೆಯನ್ನು ನೀವು ಪರಿಶೀಲಿಸಬಯಸುವಿರೋ, ಅದನ್ನು ನಮೂದಿಸಬೇಕು.

ಅದಾದ ಬಳಿಕ, ಕ್ಯಾಪ್ಚಾ ಎಂಟರ್ ಮಾಡಿ, ದೃಢೀಕರಿಸಿ, ಮುಂದುವರಿಯಿರಿ ಆಯ್ಕೆ ಕೊಡಬೇಕು.

ಆಧಾರ್ ಕಾರ್ಡ್‌ನ ನೈಜತೆ ಪತ್ತೆ ಹಚ್ಚುವುದುಹೇಗೆ?

ಇಷ್ಟಾದ ಬಳಿಕ ತೆರೆದುಕೊಳ್ಳುವ ಪುಟದಲ್ಲಿ ನೀವು ಬಯಸಿದ ಆ‌ಧಾರ್ ಸಂಖ್ಯೆಯ ವಿವರಗಳು ಲಭ್ಯವಾಗುತ್ತವೆ.

ಇಲ್ಲಿ ಖಾಸಗಿತನ ಮತ್ತು ಭದ್ರತೆಯ ಕಾರಣದಿಂದ, ವಯಸ್ಸು, ಲಿಂಗ, ರಾಜ್ಯ ಮತ್ತು ಆಧಾರ್ ಕಾರ್ಡ್ ಜತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ನ ಕೊನೆಯ ಮೂರು ಸಂಖ್ಯೆಗಳು ಕಾಣಿಸಿಕೊಳ್ಳುತ್ತದೆ. ಆಧಾರ್ ದೃಢೀಕರಣಕ್ಕೆ ಈ ವಿವರಗಳು ಸಾಕಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.