ADVERTISEMENT

ಗಲ್ಫ್ ರಾಷ್ಟ್ರಗಳಲ್ಲಿ ಬಲಿಷ್ಠವಾಗುತ್ತಿರುವ ಚೀನಾದ ಹುವೈ

ಏಜೆನ್ಸೀಸ್
Published 25 ಫೆಬ್ರುವರಿ 2021, 5:43 IST
Last Updated 25 ಫೆಬ್ರುವರಿ 2021, 5:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೀನಾ ಮೂಲದ ಟೆಲಿಕಾಂ ಸಂಸ್ಥೆ ಹುವೈ, ತೈಲ ಸಂಪದ್ಭರಿತ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯಮ ವಿಸ್ತರಿಸುವ ಮೂಲಕ ಬಲಿಷ್ಠವಾಗಿ ಬೆಳೆಯುತ್ತಿದೆ. ಆದರೆ ಅಮೆರಿಕ ಮತ್ತು ಯುರೋಪ್‌ನಲ್ಲಿ ಮಾತ್ರ ಭದ್ರತೆಗೆ ಧಕ್ಕೆ ತರುತ್ತಿರುವ ಆರೋಪಕ್ಕೆ ಒಳಗಾಗುತ್ತಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಅರಬ್ ಗಲ್ಫ್ ರಾಷ್ಟ್ರಗಳು ಹೇರಳವಾಗಿ ಹೂಡಿಕೆ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಹುವೈ ಗಲ್ಫ್‌ನಲ್ಲಿ ನೆಲೆ ವಿಸ್ತರಿಸುತ್ತಿದೆ.

ಅಮೆರಿಕದಲ್ಲಿ ಹುವೈ ಈಗಾಗಲೇ ಬಹಳಷ್ಟು ಸಮಸ್ಯೆಗೆ ಸಿಲುಕಿದ್ದು, ಚೀನಾ ಮಿಲಿಟರಿಯೊಂದಿಗೆ ಸಂಬಂಧ ಹೊಂದಿದೆ, ಹುವೈ ಉಪಕರಣಗಳನ್ನು ಗೂಢಚಾರಿಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಹೊತ್ತಿದೆ.

ADVERTISEMENT

ಜತೆಗೆ ಬ್ರಿಟನ್ ಮತ್ತು ಸ್ವೀಡನ್ ಈಗಾಗಲೇ ಹುವೈ ಕಂಪನಿಯನ್ನು ನಿರ್ಬಂಧಿಸಿದ್ದು, ಫ್ರಾನ್ಸ್ ಕೂಡ ಹುವೈಗೆ ನಿಷೇಧ ಹೇರಿದೆ. ಹುವೈ ಉಪಕರಣಗಳ ಮಾರಾಟ ಮತ್ತು 5G ನೆಟ್‌ವರ್ಕ್ ಸಂಬಂಧಿತ ಯೋಜನೆಗಳಲ್ಲಿ ಹುವೈ ಈ ರಾಷ್ಟ್ರಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ಆದೇಶವಿದೆ.

ಆದರೆ ಸೌದಿ ಅರೇಬಿಯಾ ಮತ್ತು ಅರಬ್ ಸಂಯುಕ್ತ ಸಂಸ್ಥಾನ ಮಾತ್ರ ಹುವೈ 5G ತಂತ್ರಜ್ಞಾನ ಅಳವಡಿಕೆಯ ಜತೆಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೂಡ ಪಾಲುದಾರಿಕೆ ಮಾಡಿಕೊಂಡಿವೆ. ಅಲ್ಲದೆ, ಭದ್ರತೆ ಮತ್ತು ಸುರಕ್ಷತೆಯಲ್ಲಿ ಡಿಜಿಟಲ್ ಸೇವೆಗಳನ್ನು ಅಳವಡಿಸಿಕೊಳ್ಳಲು ಹುವೈ ಜತೆಗೆ ಅರಬ್ ರಾಷ್ಟ್ರಗಳು ಒಪ್ಪಂದ ಮಾಡಿಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.