ADVERTISEMENT

ಮಿ ಬ್ಯಾಂಡ್‌4

ವಿಶ್ವನಾಥ ಎಸ್.
Published 16 ಅಕ್ಟೋಬರ್ 2019, 20:00 IST
Last Updated 16 ಅಕ್ಟೋಬರ್ 2019, 20:00 IST
ಮಿ ಬ್ಯಾಂಡ್‌4
ಮಿ ಬ್ಯಾಂಡ್‌4   

ಗುಣಮಟ್ಟ ಮತ್ತು ಮೌಲ್ಯಕ್ಕೆ ಹೆಸರಾಗಿರುವ ಶಿಯೋಮಿ ಕಂಪನಿಯು ಸ್ಮಾರ್ಟ್‌ಫೋನ್‌ ಅಲ್ಲದೆ ಇನ್ನೂ ಹಲವು ಸ್ಮಾರ್ಟ್‌ ಸಾಧನಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಇದರಲ್ಲಿ ಮುಖ್ಯವಾಗಿರುವುದು ಮಿ ಬ್ಯಾಂಡ್‌. ಈಚೆಗಷ್ಟೇ ಸುಧಾರಿತ ಆವೃತ್ತಿಯ ಮಿ ಬ್ಯಾಂಡ್‌ 4 ಬಿಡುಗಡೆ ಮಾಡಿದೆ. 0.95 ಇಂಚು ಅಮೊ ಎಲ್‌ಇಡಿ ಡಿಸ್‌ಪ್ಲೇ, ದೀರ್ಘ ಬಾಳಿಕೆಯ ಬ್ಯಾಟರಿ ಒಳಗೊಂಡಿದೆ. ಟಚ್‌ ಮತ್ತು ಸ್ವೈಪ್‌ ಆಯ್ಕೆಯು ಬಳಕೆಯನ್ನು ಸುಲಭಗೊಳಿಸುವ ಜತೆಗೆ ಬಳಕೆಯ ವೇಗವನ್ನು ಹೆಚ್ಚಿಸಿದೆ. ಪರದೆಯ ಮೇಲೆ ಬೆರಳು ತಾಗಿಸಿದಾಗ ಬ್ಯಾಂಡ್‌ ಸಕ್ರಿಯಗೊಳ್ಳುತ್ತದೆ. ಬಣ್ಣದ ಪರದೆ ಮತ್ತು ಅಕ್ಷರಗಳು ನೋಡಲು ಹಿತ ಎನಿಸುತ್ತದೆ. ಸೂರ್ಯನ ಬೆಳಕಿನಲ್ಲಿಯೂ ಪರದೆಯಲ್ಲಿರುವ ಮಾಹಿತಿ ಸ್ಪಷ್ಟವಾಗಿ ಕಾಣುತ್ತದೆ. 2.5ಡಿ ಟೆಂಪರ್ಡ್‌ಗ್ಲಾಸ್ ಮತ್ತು ಆ್ಯಂಟಿ ಫಿಂಗರ್‌ಪ್ರಿಂಟ್‌ ಕೋಟಿಂಗ್ ಪರದೆಗೆ ಅಗತ್ಯ ರಕ್ಷಣೆ ಒದಗಿಸುತ್ತವೆ.ಸ್ವಿ‌ಮ್ಮಿಂಗ್ ಮಾಹಿತಿಯನ್ನೂ ದಾಖಲಿಸಬಹುದು. ನೀರಿನಲ್ಲಿ ಗರಿಷ್ಠ 50 ಮೀಟರ್‌ ಆಳದಲ್ಲಿಯೂ ಇದು ಕೆಲಸ ಮಾಡುತ್ತದೆ. ಶವರ್, ಸ್ವಿ‌ಮ್ಮಿಂಗ್ ಪೂಲ್‌ನಲ್ಲಿ ಬಳಸಬಹುದು.

ಬಳಕೆ ಹೇಗೆ?

ಮೊಬೈಲ್‌ಗೆ ಮಿ ಫಿಟ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡಬೇಕು. ಆ ಬಳಿಕ ಮೊಬೈಲ್‌ನ ಬ್ಲೂಟೂತ್ ಆನ್‌ ಮಾಡುವ ಮೂಲಕ ಬ್ಯಾಂಡ್‌ನೊಂದಿಗೆ ಸಂಪರ್ಕ ಸಾಧಿಸಬಹುದು. ಆಂಡ್ರಾಯ್ಡ್‌ನ 4.0 ಮತ್ತು ಐಒಎಸ್‌9 ಅಥವಾ ಅದಕ್ಕಿಂತ ಹೆಚ್ಚಿನದ್ದಕ್ಕೆ ಬೆಂಬಲಿಸುತ್ತದೆ. ಮ್ಯೂಸಿಕ್‌ ಚೇಂಜ್‌ ಮಾಡಲು ಅಥವಾ pause ಮಾಡಲು ಪರದೆಯ ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್‌ ಮಾಡಿದರೆ ಆಯ್ತು.

ADVERTISEMENT

ಹಾಗೆಯೇ ಪರದೆಯ ಮೇಲ್ಭಾಗಕ್ಕೆ ಸ್ವೈಪ್‌ ಮಾಡಿದರೆ ಹವಾಮಾನದ ಮಾಹಿತಿ, ನೋಟಿಫಿಕೇಷನ್‌, ಮೆಸೇಜ್‌ ಮತ್ತು ಟ್ರ್ಯಾಕ್‌ ಆಕ್ಟಿವಿಟಿಗಳನ್ನು ಗಮನಿಸಬಹುದು

ಮೋರ್‌ಮೆನುವಿನಲ್ಲಿ ಅಲಾರ್ಮ್‌, ಸ್ಟಾಪ್‌ವಾಚ್‌, ಟೈಮರ್‌, ಡುನಾಟ್‌ಡಿಸ್ಟರ್ಬ್‌(ಡಿಎನ್‌ಡಿ) ಆಯ್ಕೆಗಳೂ ಇವೆ. ಏಕಕಾಲಕ್ಕೆ ಟ್ರೆಡ್‌ಮಿಲ್‌, ಎಕ್ಸರ್‌ಸೈಸ್‌, ಔಟ್‌ಡೋರ್‌ ರನ್ನಿಂಗ್‌, ಸೈಕ್ಲಿಂಗ್‌, ವಾಕಿಂಗ್‌, ಪೂಲ್‌ಸ್ವಿಮ್ಮಿಂಗ್, ಕೌಂಟ್‌ಸ್ಟೆಪ್ಸ್‌, ಡಿಸ್ಟೆನ್ಸ್‌ಮತ್ತು ಎಷ್ಟು ಕ್ಯಾಲರಿ ಬರ್ನ್‌ ಆಗಿದೆ ಎನ್ನುವ ಮಾಹಿತಿಗಳನ್ನು ಪಡೆಯಬಹದು.

ಲೀಥಿಯಂ ಪಾಲಿಮರ್‌ 135ಎಂಎಎಚ್‌ ಬ್ಯಾಟರಿ ಒಳಗೊಂಡಿದೆ. ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 20 ದಿನಗಳವರೆಗೆ ಚಾರ್ಜಿಂಗ್‌ ಇರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಎಲ್ಲಾ ರೀತಿಯ ಚಟುವಟಿಕೆಗಳನ್ನೂ ಸಕ್ರಿಯಗೊಳಿಸಿದರೆ ಕನಿಷ್ಠ ಒಂದು ವಾರ ಬಳಸಲು ಅಡ್ಡಿಯಿಲ್ಲ.

ಹೆಚ್ಚು ಶ್ರಮ ಬೇಕು

ಚಾರ್ಜ್‌ ಮಾಡುವ ವಿಧಾನದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ.ಬ್ಯಾಂಡ್ ಅನ್ನು ಬೆಲ್ಟ್‌ನಿಂದ ಸಂಪೂರ್ಣವಾಗಿ ಹೊರತೆಗೆದರಷ್ಟೇ ಚಾರ್ಜ್‌ ಮಾಡಲು ಸಾಧ್ಯ. ಇದು ಹೆಚ್ಚಿನ ಶ್ರಮ ಬೇಡುತ್ತದೆ. ತಕ್ಷಣಕ್ಕೆ ಚಾರ್ಜ್‌ ಮಾಡುವುದು ಕಷ್ಟ.

ವಾಲ್‌ಪೇಪರ್‌ಗೆ ಸೆಲ್ಫಿ

ಸೆಲ್ಫಿಯನ್ನು ವಾಲ್‌ಪೇಪರ್‌ ಆಗಿ ಬಳಸುವ ಆಯ್ಕೆ ನೀಡಲಾಗಿದೆ. ಇದು ಬಹುತೇಕ ಬಳಕೆದಾರರಿಗೆ ಇಷ್ಟವಾಗಲಿದೆ. ಪರದೆಯ ಬಣ್ಣ ಬದಲಿಸುವುದು, ಬೇರೆ ಬೇರೆ ವಾಲ್‌ಪೇಪರ್‌ ಆಯ್ಕೆ ಮಾಡುವುದಷ್ಟೇ ಅಲ್ಲದೆ, ಫೋನ್‌ನಲ್ಲಿ ತೆಗೆದ ಚಿತ್ರ/ಸೆಲ್ಫಿಯನ್ನೂ ಬ್ಯಾಂಡ್‌ನ ವಾಲ್‌ಪೇಪರ್‌ ಆಗಿ ಬಳಸುವ ಆಯ್ಕೆ ನೀಡಲಾಗಿದೆ. ಮಿ ಫಿಟ್ ಆ್ಯಪ್‌ನಲ್ಲಿ ಪ್ರೊಫೈಲ್‌ಗೆ ಹೋದರೆ, ಅಲ್ಲಿ Mi Smart Band 4 ಮೇಲೆ ಕ್ಲಿಕ್‌ ಮಾಡಬೇಕು. ಆಗ ತೆರೆದುಕೊಳ್ಳುವ ಪುಟದಲ್ಲಿ Band display settings ಆಯ್ಕೆ ಮೇಲೆ ಕ್ಲಿಕ್‌ ಮಾಡಿ, ಅಲ್ಲಿ Customಗೆ ಹೋಗಬೇಕು. ಅಲ್ಲಿ ಕಾಣಿಸುವ ಯಾವುದಾದರೊಂದು ಥೀಮ್‌ ಮೇಲೆ ಕ್ಲಿಕ್‌ ಮಾಡಿದರೆ, Change background ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಗ್ಯಾಲರಿಯಲ್ಲಿ ಇರುವ ಫೋಟೊ/ಅಥವಾ ಹೊಸದಾಗಿ ಸೆಲ್ಫಿ ತೆಗೆದು ಅದನ್ನು Sync watch face ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.