ADVERTISEMENT

ಫೋನ್ ಸ್ಕ್ರೀನ್ ಮೂಲಕ ಸ್ವ್ಯಾಬ್ ತೆಗೆದು ಕೋವಿಡ್ ಟೆಸ್ಟ್

ಪಿಟಿಐ
Published 24 ಜೂನ್ 2021, 12:47 IST
Last Updated 24 ಜೂನ್ 2021, 12:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ಸ್ಮಾರ್ಟ್‌ಫೋನ್‌ ಪರದೆಯಿಂದ, ತ್ವರಿತವಾಗಿ ಫಲಿತಾಂಶ ನೀಡುವ ಕೋವಿಡ್–19 ಪರೀಕ್ಷಾ ಪದ್ದತಿಯನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಯುನೈಟೆಡ್ ಕಿಂಗಡಮ್‌ನ ಯುನಿವರ್ಸಿಟಿ ಕಾಲೇಜ್ ಲಂಡನ್‌ ಸಂಶೋಧಕರು ಈ ಪದ್ದತಿಯನ್ನು ಆವಿಷ್ಕರಿಸಿದ್ದಾರೆ. ಈ ಪದ್ದತಿಯಲ್ಲಿ ನೇರವಾಗಿ ರೋಗಿಗಳಿಂದ ಸ್ವಾಬ್‌ ಸಂಗ್ರಹಿಸದೇ ಫೋನ್ ಸ್ಕ್ರೀನ್ ಟೆಸ್ಟಿಂಗ್ ವಿಧಾನದ ಮೂಲಕ ಕೋವಿಡ್ ಪರೀಕ್ಷೆ ಮಾಡಬಹುದು ಎನ್ನಲಾಗಿದೆ. ಅಂದರೆ ಫೋನ್‌ನ ಪರದೆಯಲ್ಲಿ ಸ್ವ್ಯಾಬ್ ಪರೀಕ್ಷೆ ಮಾಡಬಹುದು.

ಪ್ರಾಯೋಗಿಕವಾಗಿ ನೋಡಿದಾಗ ಸಾಮಾನ್ಯ ಆರ್‌ಟಿಪಿಸಿಆರ್‌ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದವರು ಸಹಫೋನ್ ಸ್ಕ್ರೀನ್ ಟೆಸ್ಟಿಂಗ್‌ನಲ್ಲಿ ಪಾಸಿಟಿವ್ ಬಂದಿದೆ ಎಂದು ತಿಳಿದು ಬಂದಿದೆ.

ADVERTISEMENT

ಈ ಬಗ್ಗೆ ಲಂಡನ್‌ನ ಇ–ಲೈಪ್ ಜರ್ನಲ್‌ನಲ್ಲಿ ವಿವರಿಸಲಾಗಿದೆ. 81 ರಿಂದ 100 ಫೋನ್‌ಗಳಲ್ಲಿ ಕೋವಿಡ್‌–19 ವೈರಸ್ ಪತ್ತೆ ಮಾಡಿದ್ದು. ಇದು ಆ್ಯಂಟಿಜೆನ್‌ ಟೆಸ್ಟ್‌ನಂತೆ ನಿಖರವಾಗಿದೆ ಎಂದು ತಿಳಿದು ಬಂದಿದೆ.

ಫೋನ್ ಸ್ಕ್ರೀನ್ ಟೆಸ್ಟಿಂಗ್ ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ವೈದ್ಯಕೀಯ ಸಿಬ್ಬಂದಿ ಅಗತ್ಯವಿಲ್ಲ ಎಂದು ಸಂಶೋಧನಾ ತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.