ADVERTISEMENT

₹ 10,500 ಕೋಟಿಗೆ ಲಂಡನ್‌ನ 'ಕ್ಯಾಪ್ಕೊ' ಸ್ವಾಧೀನ ಪಡಿಸಿಕೊಳ್ಳುತ್ತಿದೆ ವಿಪ್ರೊ

ಪಿಟಿಐ
Published 5 ಮಾರ್ಚ್ 2021, 4:52 IST
Last Updated 5 ಮಾರ್ಚ್ 2021, 4:52 IST
ಕ್ಯಾಪ್ಕೊ ಸ್ವಾಧೀನ ಪಡಿಸಿಕೊಂಡ ವಿಪ್ರೊ–ಕ್ಯಾಪ್ಕೊ ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್‌
ಕ್ಯಾಪ್ಕೊ ಸ್ವಾಧೀನ ಪಡಿಸಿಕೊಂಡ ವಿಪ್ರೊ–ಕ್ಯಾಪ್ಕೊ ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್‌   

ನವದೆಹಲಿ: ಲಂಡನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕ್ಯಾಪ್ಕೊ ಕಂಪನಿಯನ್ನು ವಿಪ್ರೊ ₹ 10,500 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಖರೀದಿಸಲಿದೆ. ಈ ಖರೀದಿಯು ವಿಪ್ರೊ ಪಾಲಿನ ಅತಿದೊಡ್ಡ ಸ್ವಾಧೀನ ಪ್ರಕ್ರಿಯೆ ಎಂದು ಕರೆಸಿಕೊಳ್ಳಲಿದೆ.

ಈ ಕಂಪನಿಯ ಖರೀದಿಯ ನಂತರ ವಿಪ್ರೊಗೆ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯಗಳ 30 ದೊಡ್ಡ ಗ್ರಾಹಕರು ಲಭ್ಯವಾಗಲಿದ್ದಾರೆ. ‘ಕ್ಯಾಪ್ಕೊ ಕಂಪನಿಯ ಸ್ವಾಧೀನದಿಂದಾಗಿ ನಾವು ನಮ್ಮ ಹಣಕಾಸು ಸೇವಾ ವಹಿವಾಟನ್ನು ವಿಸ್ತರಿಸಲು ಸಾಧ್ಯವಾಗುತ್ತದೆ’ ಎಂದು ವಿಪ್ರೊ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಥಿಯರಿ ಡೆಲಾಪೋರ್ಟ್ ಹೇಳಿದ್ದಾರೆ.

ಸ್ವಾಧೀನದ ನಂತರವೂ ಕ್ಯಾಪ್ಕೊ ಕಂಪನಿಯು, ಅದರ ಈಗಿನ ಸಿಇಒ ಲ್ಯಾನ್ಸ್ ಲೆವಿ ಅವರ ನೇತೃತ್ವದಲ್ಲಿ ಪ್ರತ್ಯೇಕ ಸಂಸ್ಥೆಯಾಗಿಯೇ ಕೆಲಸ ನಿರ್ವಹಿಸಲಿದೆ. ಆದರೆ, ಲೆವಿ ಅವರು ತಮ್ಮ ಕೆಲಸಗಳ ಬಗ್ಗೆ ಡೆಲಾಪೋರ್ಟ್‌ ಅವರಿಗೆ ಕಾಲಕಾಲಕ್ಕೆ ವಿವರ ನೀಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.