ADVERTISEMENT

ನೋಡಿ: ‘ಚಮ್ಮಕ್ಕ್ ಚಲ್ಲೊ‘ ಹಾಡಿಗೆ ನೃತ್ಯ ಮಾಡಿದ ಅಮೆರಿಕದ ವೃದ್ದ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2021, 6:55 IST
Last Updated 31 ಆಗಸ್ಟ್ 2021, 6:55 IST
ರಿಕ್ಕಿ ಪಾಂಡ್ ಹಾಗೂ ರೋಕ್ಸಾನ್ ಪಾಂಡ್
ರಿಕ್ಕಿ ಪಾಂಡ್ ಹಾಗೂ ರೋಕ್ಸಾನ್ ಪಾಂಡ್   

ಬೆಂಗಳೂರು: ಬಾಲಿವುಡ್ ಹಾಗೂ ದಕ್ಷಿಣ ಭಾರತ ಸಿನಿಮಾಗಳ ಹಾಡುಗಳು ಸಾಗರದಾಚೆಗೂ ಆಗಾಗ ಸದ್ದು ಮಾಡುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ.

ತಮ್ಮ 25 ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಮೆರಿಕದ ರಿಕ್ಕಿ ಪಾಂಡ್ ಹಾಗೂರೋಕ್ಸಾನ್ ಪಾಂಡ್ ದಂಪತಿ, ಶಾರುಖ್ಖಾನ್–ಕರೀನಾ ಕಪೂರ್ ಅಭಿನಯದ ರಾಒನ್ ಸಿನಿಮಾದ ‘ಚಮ್ಮಕ್ ಚಲ್ಲೊ‘ ಹಾಡಿಗೆ ನೃತ್ಯ ಮಾಡಿ ಇಂಟರ್‌ನೆಟ್‌ನಲ್ಲಿ ಹವಾ ಸೃಷ್ಟಿಸಿದ್ದಾರೆ.

ಸದ್ಯ ಈ ವಿಡಿಯೊ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು,ಈ ವೃದ್ದ ದಂಪತಿಯಜೀವನೋತ್ಸಾಹಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. ರಿಕ್ಕಿ ಪಾಂಡ್ ಅವರು ಅಮೆರಿಕದಲ್ಲಿ ಇತ್ತೀಚೆಗೆ ‘ಡ್ಯಾನ್ಸಿಂಗ್ ಡ್ಯಾಡಿ‘ ಎಂದೇ ಮನೆಮಾತಾಗುತ್ತಿದ್ದಾರೆ.

ADVERTISEMENT

ಈ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಚಮ್ಮಕ್ ಚಲ್ಲೊ ಹಾಡಿಗೆ ಭಾರತೀಯ ಉಡುಗೆಯಲ್ಲಿ ಕಾಣಿಸಿಕೊಂಡು ಸಕತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಇದಕ್ಕೆ ‘Happy 25th Anniversary.. Chammakk Challo‘ ಎಂದು ಒಕ್ಕಣಿಕೆ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಭಾರತೀಯ ಹಾಡುಗಳಿಗೆ ಪಾಶ್ಚಿಮಾತ್ಯರು ಮಾರು ಹೋಗುತ್ತಾರೆ ಎಂಬುದನ್ನು ರಿಕ್ಕಿ ಪಾಂಡ್ ಸಾಬೀತುಪಡಿಸಿದ್ದಾರೆ.

ಇನ್ನು ರಾಒನ್ ಸಿನಿಮಾ 2011 ರಲ್ಲಿ ನಿರ್ದೇಶಕ ಅನುಭವ್ ಸಿನ್ಹಾ ಅವರ ನಿರ್ದೇಶನದಲ್ಲಿ ತೆರೆಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.