ADVERTISEMENT

ಲಾಕ್‌ಡೌನ್ ಅಂದ್ರೇನು ಗೊತ್ತಾ? ಆನಂದ್ ಮಹೀಂದ್ರಾ ಹೇಳೋದು ಕೇಳಿ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2021, 11:31 IST
Last Updated 7 ಜೂನ್ 2021, 11:31 IST
ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾ   

ಬೆಂಗಳೂರು: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಉದ್ಯಮ ಸಮೂಹದ ಮುಖ್ಯಸ್ಥ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣ ಖಾತೆ ಬಳಕೆಯಲ್ಲಿ ಯಾವತ್ತೂ ಮುಂದಿರುತ್ತಾರೆ. ಸದಾ ಹೊಸ ವಿಚಾರಗಳನ್ನು ಜನರೊಡನೆ ಅವರು ಹಂಚಿಕೊಳ್ಳುತ್ತಿರುತ್ತಾರೆ.

ಆನಂದ್ ಮಹೀಂದ್ರಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟಿಕ್‌ಟಾಕ್ ವಿಡಿಯೊ ಒಂದನ್ನು ಪೋಸ್ಟ್ ಮಾಡುವ ಮೂಲಕ ಲಾಕ್‌ಡೌನ್ ಎಂದರೇನು ಎನ್ನುವುದನ್ನು ವಿವರಿಸಿದ್ದಾರೆ.

ಯುವಕನೋರ್ವ ಮನೆಬಾಗಿಲಿಗೆ ಇರುವ ಲಾಕ್‌ಗೆ ದಾರವೊಂದನ್ನು ಕಟ್ಟಿ ಅದನ್ನು ಕೆಳಗೆ ಇಳಿಸುವ ಆರು ಸೆಕೆಂಡ್‌ಗಳ ವಿಡಿಯೊ ಇದಾಗಿದ್ದು, ಅದರಲ್ಲಿ ಲಾಕ್‌ಡೌನ್ ಮಾಡುವುದು ಹೇಗೆ ಎಂದು ಯುವಕ ಹೇಳುತ್ತಾನೆ.

ADVERTISEMENT

ಇದೊಂದು ತಮಾಷೆ ವಿಡಿಯೊ ಆಗಿದ್ದು, ನಮಗೆ ಹಾಸ್ಯಪ್ರಜ್ಞೆ ಇರಬೇಕು ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ. ಅಲ್ಲದೆ, ಪ್ರತಿ ರಾಜ್ಯಗಳ ನಾಯಕರು ಲಾಕ್‌ಡೌನ್ ಜಾರಿ ಮಾಡುವುದು ಮತ್ತು ಅದರಿಂದ ಏನು ಪ್ರಯೋಜನ ಎನ್ನುವ ಕುರಿತು ಚಿಂತಿಸಬೇಕು ಎಂಬ ಸಲಹೆಯನ್ನು ಅವರು ನೀಡಿದ್ದಾರೆ.

ಈ ಪೋಸ್ಟ್‌ಗೆ ಜನರು ಪರ-ವಿರೋಧ ಅಭಿಪ್ರಾಯವನ್ನು ಟ್ವಿಟರ್‌ ಕಮೆಂಟ್ಸ್‌ನಲ್ಲಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.