ADVERTISEMENT

ವಿಡಿಯೊ: ಹುಂಜ, ಮೇಕೆಯ ಪ್ರತಿದಾಳಿ; ಕೋಳಿ ಆಸೆ ಬಿಟ್ಟು ಹಾರಿದ ಗಿಡುಗ 

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 8:48 IST
Last Updated 18 ಸೆಪ್ಟೆಂಬರ್ 2021, 8:48 IST
ಕೋಳಿ ಮೇಲೆ ದಾಳಿ ಮಾಡಿದ ಗಿಡುಗ
ಕೋಳಿ ಮೇಲೆ ದಾಳಿ ಮಾಡಿದ ಗಿಡುಗ   

ಗಿಡುಗನಿಗೆ ಆಹಾರವಾಗುತ್ತಿದ್ದ ಕೋಳಿಯನ್ನುಮೇಕೆ ಮತ್ತು ಹುಂಜರಕ್ಷಣೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಹೊಲದಲ್ಲಿ ಆಹಾರಕ್ಕಾಗಿ ಅಲೆಯುತ್ತಿದ್ದ ಕೋಳಿಯನ್ನು ಕಂಡ ಗಿಡುಗ ದಾಳಿಗೆ ಮುಂದಾಯಿತು. ಅದನ್ನು ಹೊತ್ತೊಯ್ಯಲು ಮುಂದಾದ ಗಿಡುಗನನ್ನು ನೋಡಿದ ಹುಂಜಪ್ರತಿದಾಳಿಮಾಡಿತು. ಪಕ್ಕದಲ್ಲೇ ಇದ್ದ ಮೇಕೆ ಕೂಡ ನೆರವಿಗೆ ಬಂದು ಗಿಡುಗನನ್ನು ಅಲ್ಲಿಂದ ಹಾರುವಂತೆ ಮಾಡಿದವು.

ಮೇಕೆ ಮತ್ತು ಹುಂಜ ಸೇರಿ ಗೆಳೆಯ ಕೋಳಿಯನ್ನು ರಕ್ಷಣೆ ಮಾಡಿದವು.

ADVERTISEMENT

ಈ ವಿಡಿಯೊವನ್ನು ’ಬ್ಯೂಟೆಂಗೆಬೀಡೆನ್’ ಎಂಬುವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೊ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ಲಕ್ಷಾಂತರ ಜನರು ಶೇರ್‌ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.