ADVERTISEMENT

ವಿಡಿಯೊ ನೋಡಿ: ಬೆಕ್ಕು ಹಿಡಿಯಲು ಹೋಗಿ ಬಾವಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 10:53 IST
Last Updated 7 ಸೆಪ್ಟೆಂಬರ್ 2021, 10:53 IST
ಚಿರತೆ ಮತ್ತು ಬೆಕ್ಕು
ಚಿರತೆ ಮತ್ತು ಬೆಕ್ಕು   

ಬೆಕ್ಕು ಹಿಡಿಯಲು ಹೋಗಿ ಚಿರತೆಯೊಂದು ಬೆಕ್ಕಿನ ಜತೆಯಲ್ಲೇ ಬಾವಿಗೆ ಬಿದ್ದಿರುವ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಈ ಘಟನೆ ನಡೆದಿದೆ.

ಬಾವಿಯಲ್ಲಿ ಬೆಕ್ಕಿನ ವಿರುದ್ಧ ದಾಳಿಗೆ ಚಿರತೆ ಮುಂದಾಯಿತಾದರೂ ಮಾರ್ಜಾಲದ ಮೋಡಿಗೆ ಚಿರತೆ ಮನಸೋತಿತು. ನಂತರ ಕೆಲಹೊತ್ತು ಈ ಎರಡು ಪ್ರಾಣಿಗಳು ಗೆಳೆಯರಂತೆ ಬೀಗಿದವು.

ADVERTISEMENT

ಚಿರತೆ ಮತ್ತು ಬೆಕ್ಕು ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಇಲಾಖೆ ಸಿಬ್ಬಂದಿಗಳು ಚಿರತೆ ಮತ್ತು ಬೆಕ್ಕನ್ನು ರಕ್ಷಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.