ADVERTISEMENT

ಲೂಡೊ ಗೇಮ್‌ ಎನ್ನುವುದು ಲಕ್ ಅಥವಾ ಕೌಶಲ?: ಕೋರ್ಟ್ ತೀರ್ಪು ಬಗ್ಗೆ ಟ್ವಿಟರ್ ಚರ್ಚೆ

ಏಜೆನ್ಸೀಸ್
Published 8 ಜೂನ್ 2021, 10:22 IST
Last Updated 8 ಜೂನ್ 2021, 10:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಆನ್‌ಲೈನ್ ಲೂಡೊ ಗೇಮ್ ಅತಿ ಹೆಚ್ಚಿನ ಜನಪ್ರಿಯತೆ ಗಳಿಸಿತ್ತು. ವಿವಿಧ ಮೊಬೈಲ್ ಗೇಮ್ ತಯಾರಿಕ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಆಕರ್ಷಕ ಫೀಚರ್‌ಗಳನ್ನು ಮೊಬೈಲ್‌ ಲೂಡೊದಲ್ಲಿ ಪರಿಚಯಿಸಿದ್ದವು.

ಆದರೆ ಲೂಡೊ ಗೇಮ್ ವಿಚಾರ ಈಗ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ. ಕೇಶವ್ ಮುಲೆ ಎಂಬವರು ಲೂಡೊ ಗೇಮ್ ಎನ್ನುವುದು ಲಕ್ ಅಥವಾ ಕೌಶಲ ಆಧಾರಿತ ಎಂಬ ಗೊಂದಲ ಪರಿಹರಿಸಿ ತೀರ್ಪು ನೀಡಬೇಕು ಎಂದು ಕೋರಿ ಬಾಂಬೆ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಲೂಡೊ ಗೇಮ್ ಕುರಿತು ಹೈಕೋರ್ಟ್‌ ಅರ್ಜಿ ಸಲ್ಲಿಸಿರುವ ವಿಚಾರ ಬಹಿರಂಗವಾಗುತ್ತಿದ್ದಂತೆ, ಸಾಮಾಜಿಕ ತಾಣಗಳಲ್ಲಿ ತರಹೇವಾಗಿ ಮೀಮ್ಸ್, ಜೋಕ್ಸ್ ಸಷ್ಟಿಯಾಗಿದೆ.

ADVERTISEMENT

ಮನೆಯವರು, ಗೆಳೆಯರ ಜತೆಗೆ ಆಡುವ ಲೂಡೊ ಗೇಮ್, ಕೆಲವೊಮ್ಮೆ ಕೌಶಲ ಬಳಸಿದರೆ, ಮತ್ತೆ ಕೆಲವೊಮ್ಮೆ ಅದೃಷ್ಟದ ಮೇಲೆ ನಿರ್ಧರಿತವಾಗುತ್ತದೆ.

ಆದರೆ ಲೂಡೊ ಗೇಮ್ ಬಗ್ಗೆ ಹೈಕೋರ್ಟ್ ಮೊರೆ ಹೋಗಿರುವುದು ಮಾತ್ರ ಮೀಮ್ಸ್ ರಚಿಸುವವರಿಗೆ ಹಬ್ಬದಂತಾಗಿದೆ. ವಿವಿಧ ಟ್ರೋಲ್ ಪೇಜ್‌ಗಳು ಮತ್ತು ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ಲೂಡೊ ಗೇಮ್ ಕುರಿತು ಚರ್ಚೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.