ADVERTISEMENT

ಶ್ರೇಯಸ್ ತಂಗಿ ಶ್ರೇಷ್ಠ ವಿಡಿಯೊಗೆ ನಟ ಟೈಗರ್ ಶ್ರಾಫ್ ಪ್ರತಿಕ್ರಿಯೆ ಹೀಗಿತ್ತು!

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 10:51 IST
Last Updated 26 ಜೂನ್ 2021, 10:51 IST
ಶ್ರೇಯಸ್, ತಂಗಿ ಶ್ರೇಷ್ಠ
ಶ್ರೇಯಸ್, ತಂಗಿ ಶ್ರೇಷ್ಠ   

ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರು ತಂಗಿ ಶ್ರೇಷ್ಠ ಅಯ್ಯರ್ ಜೊತೆ ಸೇರಿ‘ಬ್ರದರ್ ವರ್ಸಸ್‌ ಸಿಸ್ಟರ್‌ ಚಾಲೆಂಜ್‌’ ವಿಡಿಯೊ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ವಿಶ್ರಾಂತಿ ಪಡೆಯುತ್ತಿರುವ ಶ್ರೇಯಸ್‌ ಅಯ್ಯರ್‌, ತಂಗಿ ಶ್ರೇಷ್ಠ ಜೊತೆಗೆ ಫನ್ನಿಯಾಗಿರುವ ಚಾಲೆಂಜಿಂಗ್‌ ವಿಡಿಯೊ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ಟೈಗರ್‌ ಶ್ರಾಪ್‌ ಆ ವಿಡಿಯೊಗೆ ಮೆಚ್ಚುಗೆಯ ಕಮೆಂಟ್‌ ಹಾಕಿದ್ದಾರೆ.

ಈ ಚಾಲೆಂಜಿಂಗ್‌ ವಿಡಿಯೊದಲ್ಲಿ, ಒಬ್ಬರು ನಿರ್ದಿಷ್ಟ ದಿಕ್ಕಿನತ್ತ ಬೊಟ್ಟು ಮಾಡಬೇಕು, ಅವರ ಎದುರಲ್ಲಿ ಇರುವವರು ಬೊಟ್ಟು ಮಾಡಿದ ದಿಕ್ಕಿನ ವಿರುದ್ಧವಾಗಿ ನೋಡಬೇಕು ಎಂಬುದು ಚಾಲೆಂಜಿಂಗ್‌ ವಿಡಿಯೊದ ಹೂರಣ. ಈ ಆಟದಲ್ಲಿ ಇಬ್ಬರು ತಲಾ ಒಂದು ಸಲ ಸೋತರೂ ಅಂತಿಮವಾಗಿ ಶ್ರೇಯಸ್‌ ಗೆಲ್ಲುತ್ತಾರೆ.

ADVERTISEMENT

ಈ ವಿಡಿಯೊ ವೀಕ್ಷಿಸಿರುವ ಟೈಗರ್‌ ಶ್ರಾಪ್‌ ನಗುವಿನ ಎಮೋಜಿ ಹಾಕುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.