ADVERTISEMENT

ಏರ್ ಇಂಡಿಯಾ ವಿಮಾನದಲ್ಲಿ ಮಹಾರಾಜನಂತೆ ಏಕಾಂಗಿಯಾಗಿ ದುಬೈಗೆ ಪ್ರಯಾಣಿಸಿದ ಉದ್ಯಮಿ

ಏಜೆನ್ಸೀಸ್
Published 25 ಜೂನ್ 2021, 6:25 IST
Last Updated 25 ಜೂನ್ 2021, 6:25 IST
ಅಬುಧಾಬಿ ಮೂಲದ ಉದ್ಯಮಿಯ ಏಕಾಂಗಿ ಪ್ರಯಾಣ  (Photo/ ANI)
ಅಬುಧಾಬಿ ಮೂಲದ ಉದ್ಯಮಿಯ ಏಕಾಂಗಿ ಪ್ರಯಾಣ (Photo/ ANI)   

ನವದೆಹಲಿ: ಯುಎಇ ಮೂಲದ ಭಾರತೀಯ ಉದ್ಯಮಿಯೊಬ್ಬರು ಅಮೃತಸರದಿಂದ ದುಬೈಗೆ ಏರ್ ಇಂಡಿಯಾ ಅಂತರರಾಷ್ಟ್ರೀಯ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿ ಸುದ್ದಿಯಾಗಿದ್ದಾರೆ.

ಉದ್ಯಮಿ ಮತ್ತು ದಾನಿಯಾಗಿರುವ ಎಸ್‌ಪಿ ಸಿಂಗ್ ಒಬೆರಾಯ್, ಬುಧವಾರ ಬೆಳಗ್ಗೆ ನಾಲ್ಕು ಗಂಟೆಗೆ ಅಮೃತಸರದಿಂದ ದುಬೈಗೆ ತೆರಳಿದ ಏರ್ ಇಂಡಿಯಾ (AI-929) ವಿಮಾನದಲ್ಲಿ ಏಕೈಕ ಪ್ರಯಾಣಿಕರಾಗಿದ್ದರು.

ಈ ಪ್ರಯಾಣವು ನನಗೆ ಮಹಾರಾಜನ ಅನುಭವ ನೀಡಿತು ಎಂದು ಸಿಂಗ್ ‘ಎಎನ್‌ಐ’ಗೆ ಹೇಳಿದ್ದಾರೆ.

ಎಸ್‌ಪಿ ಸಿಂಗ್, 10 ವರ್ಷಗಳ ಅವಧಿಯ ದುಬೈ ಗೋಲ್ಡನ್ ವೀಸಾ ಪಡೆದಿದ್ದು, ಅಲ್ಲಿ ಅವರ ಉದ್ಯಮ ಕೂಡ ಇದೆ. ಹೀಗಾಗಿ ಅವರು ಏಕೈಕ ಪ್ರಯಾಣಿಕನಾಗಿದ್ದರೂ, ವಿಮಾನ ಹಾರಾಟ ನಡೆಸಿದೆ.

ಅಮೃತಸರದಿಂದ ದುಬೈ ಪ್ರಯಾಣಕ್ಕೆ ಸಿಂಗ್ 750 ದಿರ್ಹಂ (ಅಂದಾಜು ₹15,000) ತೆತ್ತು ಟಿಕೆಟ್ ಖರೀದಿಸಿದ್ದರು.

ಪ್ರಯಾಣದ ಅವಧಿಯಲ್ಲಿ ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಒಟ್ಟಾರೆಯಾಗಿ ಈ ಅನುಭವ ಚೆನ್ನಾಗಿತ್ತು. ಆದರೆ ಯಾರೂ ಜತೆಗಿಲ್ಲದೆ ಬೋರ್ ಅನ್ನಿಸತೊಡಗಿತು ಎಂದು ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.