ADVERTISEMENT

ತಿಮಿಂಗಿಲ ನುಂಗಿದರೂ ಬದುಕಿ ಬಂದೆ: ಸೀ ಡೈವರ್ ಹೇಳಿದ ರೋಚಕ ಘಟನೆ

ತಿಮಿಂಗಿಲ ದವಡೆಯಿಂದ ಬಚಾವ್

ಏಜೆನ್ಸೀಸ್
Published 13 ಜೂನ್ 2021, 13:38 IST
Last Updated 13 ಜೂನ್ 2021, 13:38 IST
ಮೈಕಲ್ ಪಾಕಾರ್ಡ್, ಚಿತ್ರ–ಟ್ವಿಟರ್
ಮೈಕಲ್ ಪಾಕಾರ್ಡ್, ಚಿತ್ರ–ಟ್ವಿಟರ್   

ನ್ಯೂಯಾರ್ಕ್: ಕೆಲವರು ಯಾವುದೋ ಕೆಟ್ಟ ಸಂದರ್ಭದಲ್ಲಿ ಸಿಲುಕಿಕೊಂಡು ಸಾವಿನ ದವಡೆಯಿಂದ ಪಾರಾಗಿ ಬಂದೆ ಎನ್ನುತ್ತಾರೆ. ಇಲ್ಲೊಬ್ಬ ಅಕ್ಷರಶಃ ಸಾವಿನ ದವಡೆಯಿಂದ ಪಾರಾಗಿ ಬಂದು ಸುದ್ದಿಯಾಗಿದ್ದಾನೆ.

ಹೌದು, ಅಮೆರಿಕದ ಮೆಸ್ಸಾಚುಯೆಟ್ಸ್‌ನ ಈಶಾನ್ಯ ಭಾಗದ ಕಡಲಲ್ಲಿ 55 ವರ್ಷದ ವ್ಯಕ್ತಿ ಮೈಕಲ್ ಪಾಕಾರ್ಡ್ ಎನ್ನುವ ಮೀನುಗಾರ ಹಾಗೂ ಸೀ ಡೈವರ್ (ಸಮುದ್ರದ ಮುಳುಗು ತಜ್ಞ) ತಿಮಿಂಗಿಲ ಬಾಯಿಯೊಳಗೆ ಹೋಗಿ ವಾಪಸ್ ಬದುಕಿ ಬಂದಿರುವ ಘಟನೆ ಇದು.

ಶುಕ್ರವಾರ ಎಂದಿನಂತೆ ಪಾಕಾರ್ಡ್ ಕಡಲಡೈವಿಂಗ್ ಮಾಡುವಾಗ 40 ಅಡಿ ಆಳ ಸಮುದ್ರದಲ್ಲಿ ಇಳಿದಿದ್ದಾನೆ. ಈ ವೇಳೆ ದೈತ್ಯ ತಿಮಿಂಗಿಲೊಂದು ಬಂದು ಪಾಕಾರ್ಡ್‌ನನ್ನು ಗಬಕ್ಕನೇ ಬಾಯಿಗೆ ಹಾಕಿಕೊಂಡಿದೆ. ಇದರಿಂದ ಸತ್ತೇ ಹೋದೆ ಎಂದುಕೊಂಡಿದ್ದ ಪಾಕಾರ್ಡ್‌ಗೆ 40 ಸೆಕೆಂಡ್ ನಂತರ ಆಶ್ಚರ್ಯ ಕಾದಿತ್ತು.

ADVERTISEMENT

ಏಕೆಂದರೆ, ಪಾಕಾರ್ಡ್‌ನನ್ನು ನುಂಗಿದ್ದ ತಿಮಿಂಗಿಲಕೆಲವೇ ಕ್ಷಣಗಳಲ್ಲಿ ಆತನನ್ನು ಹೊರಗೆ ಉಗುಳಿದೆ. ಇದರಿಂದ ಪಾಕಾರ್ಡ್‌ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಈ ವಿಷಯವನ್ನು ಸ್ವತಃ ಪಾಕಾರ್ಡ್‌ ಅವರೇ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮೈಗೆ ತರುಚಿದ ಗಾಯಗಳಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

‘ನಾನು ಡೈವಿಂಗ್ ಮಾಡುವಾಗ ಹಂಪ್‌ಬ್ಯಾಕ್ ತಿಮಿಂಗಿಲನನ್ನನ್ನು ನೇರವಾಗಿ ತನ್ನ ಬಾಯಿಯೊಳಗೆ ಸೆಳೆದುಕೊಂಡು ಬಾಯಿ ಮುಚ್ಚಿತು. ಆಗ ಸಂಪೂರ್ಣ ಕತ್ತಲು ಆವರಿಸಿತು. ಏನು ಮಾಡಬೇಕು ಎಂದು ತೋಚದೆ ನನ್ನಿಬ್ಬರು ಮಕ್ಕಳನ್ನು ನೆನಪು ಮಾಡಿಕೊಂಡೆ. ನನ್ನ ಒದ್ದಾಟ ಜೋರಾಯಿತು. ಸುಮಾರು 30 ರಿಂದ 40 ಸೆಕೆಂಡ್‌ನಲ್ಲಿ ತಿಮಿಂಗಿಲನನ್ನನ್ನು ಹೊರಗೆ ಉಗುಳಿತು. ನಾನೊಬ್ಬ ಅದೃಷ್ಠವಂತ, ಪಾರಾಗಿ ಬಂದೆ’ ಎಂದು ಪಾಕಾರ್ಡ್‌ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.