ADVERTISEMENT

ವಿಡಿಯೊ | ಕೋತಿಗಳ ಮುಂದೆ ಕರಡಿ ವೇಷದಲ್ಲಿ ಬಂದ ಐಟಿಬಿಪಿ ಸಿಬ್ಬಂದಿ

ಏಜೆನ್ಸೀಸ್
Published 10 ಮಾರ್ಚ್ 2020, 2:55 IST
Last Updated 10 ಮಾರ್ಚ್ 2020, 2:55 IST
ಕರಡಿ ವೇಷದಲ್ಲಿ ಐಟಿಬಿಪಿ ಸಿಬ್ಬಂದಿ
ಕರಡಿ ವೇಷದಲ್ಲಿ ಐಟಿಬಿಪಿ ಸಿಬ್ಬಂದಿ    

ಬೆಂಗಳೂರು: ಕೋತಿಗಳ ಹಾವಳಿ ತಪ್ಪಿಸಲು ಸಿಡಿಮದ್ದು ಸಿಡಿಸುವುದು, ಜೋರು ಸದ್ದು ಮಾಡಿ ಬೆದರಿಸುವುದು ಅಥವಾ ಬೆದುರು ಗೊಂಬೆಗಳನ್ನು ಕೂರಿಸುವ ತಂತ್ರ ಅನುಸರಿಸುವುದು ಸಾಮಾನ್ಯ. ಆದರೆ, ಇಂಡೊ ಟಿಬೆಟನ್‌ ಬಾರ್ಡರ್‌ ಫೋರ್ಸ್‌ (ಐಟಿಬಿಪಿ) ಸಿಬ್ಬಂದಿ ಕರಡಿ ವೇಷ ಧರಸಿ ಓಡಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದರ ವಿಡಿಯೊ ವೈರಲ್‌ ಆಗಿದೆ.

ಉತ್ತರಾಖಂಡದ ಮಿರ್ಥಿ ಶಿಬಿರದ ಬಳಿ ಕೋತಿಗಳನ್ನು ಓಡಿಸಲು ಐಟಿಬಿಪಿಯ ಇಬ್ಬರು ಸಿಬ್ಬಂದಿ ಕರಡಿಯಂತೆ ವೇಷ ಧರಿಸಿ, ಕೋತಿಗಳ ಬೆನ್ನಟ್ಟಿ ಓಡಾಡುವುದನ್ನು ವಿಡಿಯೊದಲ್ಲಿ ಕಾಣಬಹುದು.

ವೇಷಧಾರಿ ಸಿಬ್ಬಂದಿಗಳು ಹೆಜ್ಜೆ ಇಡುತ್ತಿದ್ದಂತೆ ಕೋತಿಗಳು ಬೆದರಿ, ಸಮೀಪದ ಕಾಡಿನೊಳಗೆ ಓಡಿವೆ. ಈ ವಿಡಿಯೊ ಟ್ವಿಟರ್‌ನಲ್ಲಿ ಸಾವಿರಾರು ವೀಕ್ಷಣೆ ಕಂಡಿದ್ದು, ನಗೆಬುಗ್ಗೆ ಹರಡಿದೆ.

ADVERTISEMENT

ಕಾಡಿನ ಪ್ರದೇಶವನ್ನು ಅತಿಕ್ರಮಿಸಿಕೊಳ್ಳುತ್ತಿರುವ ಮನುಷ್ಯನ ಕಾರಣದಿಂದಲೇ ಪ್ರಾಣಿಗಳು ಆಹಾರಕ್ಕಾಗಿ ನಾಡಿನತ್ತ ಸಾಗುತ್ತಿವೆ. ಆನೆ, ಚಿರತೆ, ಕೋತಿಗಳು ಕಾಡಿನಿಂದ ಹೊರ ಬಂದು ಹಳ್ಳಿಗಳತ್ತ ನುಗ್ಗುತ್ತಿರುವ ಘಟನೆಗಳು ಕೆಲವು ವರ್ಷಗಳಿಂದ ಆಗಾಗ್ಗೆ ವರದಿಯಾಗುತ್ತಲೇ ಇವೆ.

ಕಳೆದ ತಿಂಗಳು ಗುಜರಾತ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೈದಾನದಲ್ಲಿ ಏರ್‌ಪೋರ್ಟ್‌ ಸಿಬ್ಬಂದಿ ಕರಡಿ ವೇಷದಲ್ಲಿ ಓಡಾಡಿದ್ದರು. ಲಂಗೂರ್‌ಗಳದೊಡ್ಡ ಗುಂಪನ್ನು ಓಡಿಸಲು ಕರಡಿ ವೇಷ ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.