ADVERTISEMENT

ನೋಡಿ: ಜಸ್ಟ್‌ ಮ್ಯೂಸಿಕ್‌– 33 | ‘ಆನಂದ’ಮಯ...

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 2:47 IST
Last Updated 7 ಆಗಸ್ಟ್ 2021, 2:47 IST

ಮೃದಂಗ ದಿಗ್ಗಜ ವಿದ್ವಾನ್‌ ಎ.ವಿ.ಆನಂದ್‌ ಅವರಿಗೆ ಈಗ 85 ವರ್ಷ ವಯಸ್ಸು. ಐದು ತಲೆಮಾರುಗಳ ಕಲಾವಿದರಿಗೆ ಮೃದಂಗ ನುಡಿಸಿದ ಅವರ ಹಾದಿಯಲ್ಲಿ ಹಲವು ಅಚ್ಚರಿಗಳಿವೆ. 9ನೇ ವಯಸ್ಸಿನಿಂದ ಮೃದಂಗ ನುಡಿಸುತ್ತಿರುವ ಅವರು ದೇಶದ ನೂರಾರು ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರ ಗಾಯನಕ್ಕೆ, ವಾದ್ಯ ವೈಭವಕ್ಕೆ ಮೃದಂಗ ಸಾಥಿಯಾಗಿದ್ಧಾರೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಜುಗಲ್‌ಬಂದಿಗಳಿಗೂ ಜೊತೆಯಾಗಿದ್ದಾರೆ. 40ರ ದಶಕದಿಂದ ಮೃದಂಗ ನುಡಿಸುತ್ತಿರುವ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ತಾಳವಾದ್ಯ ವಿನ್ಯಾಸಕನಾಗಿ ಹಲವು ಆಶ್ಚರ್ಯ ಸೃಷ್ಟಿಸಿದ್ದಾರೆ. ನೂರಾರು ತೀರ್ಮಾನ, ಮುಕ್ತಾಯಗಳನ್ನು ಸೃಷ್ಟಿಸಿ ತಮ್ಮದೇ ಆದ ಶೈಲಿಯನ್ನು ಕೊಡುಗೆಯಾಗಿ ನೀಡಿದ್ಧಾರೆ.


ತಾಳವಾದ್ಯ ಕುರಿತಂತೆ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಹಲವು ದೇಶಗಳಲ್ಲಿ ಪ್ರವಾಸ ಮಾಡಿ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಪಠ್ಯಪುಸ್ತಕ ಸಮಿತಿಯಲ್ಲಿದ್ದ ಅವರು ವಿದ್ವಾಂಸರ ಜೊತೆ ತಾಳವಾದ್ಯ ಪಠ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ಧಾರೆ.

1947ರಲ್ಲಿ ಮೈಸೂರು ಟಿ ಚೌಡಯ್ಯ ಅವರ ವೈಲಿನ್‌ ಕಛೇರಿಗೆ ಮೃದಂಗ ನುಡಿಸುವ ಮೂಲಕ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಮೊದಲ ಬಾರಿಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ವಿದ್ವಾನ್‌ ಎ.ವಿ.ಆನಂದ್‌ ಅವರು ಹಿಂದೆ ತಿರುಗಿ ನೋಡಿಲ್ಲ. ಅವರ ಮೃದಂಗ ಪಯಣದ ಮೇಲೆ ಈ ವಾರದ ‘ಜಸ್ಟ್‌ ಮ್ಯೂಸಿಕ್‌’ ಸರಣಿಯಲ್ಲಿ ಬೆಳಕು ಚೆಲ್ಲಲಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT