ADVERTISEMENT

ನೋಡಿ: ಜಸ್ಟ್ ಮ್ಯೂಸಿಕ್- 35 | ಸಂಗೀತ ಶಕ್ತಿಗೆ ಸೋತ ಕ್ಯಾನ್ಸರ್‌!

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 3:38 IST
Last Updated 21 ಆಗಸ್ಟ್ 2021, 3:38 IST

ತಮಿಳುನಾಡಿನಲ್ಲಿ ಹುಟ್ಟಿ ಬೆಳೆದು ಕರ್ನಾಟಕಕ್ಕೆ ಮದುವೆಯಾಗಿ ಬಂದ ವಿದುಷಿ ನೀಲಾ ರಾಮ್‌ಗೋಪಾಲ್‌ ಅವರು ದೇಶದ ಅತ್ಯಂತ ಹಿರಿಯ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ. 86ನೇ ವಯಸ್ಸಿನಲ್ಲೂ 3 ಗಂಟೆ ಹಾಡುವ ಅವರು ಜೀವನೋತ್ಸಾಹದ ಚಿಲುಮೆಯಾಗಿದ್ದಾರೆ. ತಮಿಳುನಾಡಿನ ತ್ಯಾಗರಾಜಪುರಂ ಎಂಬ ಹಳ್ಳಿಯಿಂದ ಆರಂಭವಾದ ಅವರ ಗಾಯನ ಯಾತ್ರೆ ಲಂಡನ್‌ನ ಭಾರತೀಯ ಭವನದವರೆಗೂ ತಲುಪಿದೆ. 72 ಮೇಳಕರ್ತ ರಾಗಗಳನ್ನು ಹಾಡಿ 19 ಧ್ವನಿಸುರಳಿ ಹೊರತಂದಿದ್ದಾರೆ. ಇವು ಸಂಗೀತ ವಿದ್ಯಾರ್ಥಿಗಳ ಜ್ಞಾನ ಭಂಡಾರವಾಗಿವೆ. 59ನೇ ವರ್ಷದಲ್ಲಿ ನೀಲಾ ಅವರು ಕ್ಯಾನ್ಸರ್‌ಗೆ ತುತ್ತಾಗಿದ್ದರು. ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಅವರು ಒಂದು ವರ್ಷ ಚಿಕಿತ್ಸೆ ಪಡೆದರು. ಕಿಮೊ ಥೆರಪಿಯಿಂದಾಗಿ ಧ್ವನಿಗೂ ಅಪಾಯವಾಗಿತ್ತು. ಆದರೆ, ಅವರೊಳಗಿನ ಸಂಗೀತ ಶಕ್ತಿ ಮಹಾಮಾರಿ ಕ್ಯಾನ್ಸರ್‌ ಕಾಯಿಲೆಯನ್ನು ಸೋಲಿಸಿತು. ಅವರ ಬದುಕಿನ ಸಂಗೀತಯಾತ್ರೆ ಈ ವಾರದ ‘ಜಸ್ಟ್‌ ಮ್ಯೂಸಿಕ್‌’ ಸರಣಿಯಲ್ಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT