ADVERTISEMENT

ನೋಡಿ| ಜಸ್ಟ್‌ ಮ್ಯೂಸಿಕ್‌– 22: ಹೀಗೊಂದು ಸಂಗೀತ ಪಯಣ!

​ಪ್ರಜಾವಾಣಿ ವಾರ್ತೆ
Published 22 ಮೇ 2021, 1:58 IST
Last Updated 22 ಮೇ 2021, 1:58 IST

ಧಾರವಾಡದಲ್ಲಿ ನಿಂತು ಮೇಲಕ್ಕೆ ಕಲ್ಲೆಸೆದರೆ ಅದು ಯಾವುದಾದರೂ ಸಾಹಿತಿಗಳ ಮನೆ ಮೇಲೆ ಬೀಳುತ್ತೆ ಎಂಬ ಮಾತಿದೆ. ಅದೇ ರೀತಿ ಮೈಸೂರಿನಲ್ಲಿ ಯಾರಾದರೂ ವೈಲಿನ್‌ ಹಿಡಿದು ಹೋಗುತ್ತಿದ್ದರೆ ಅವರು ವಿದ್ವಾನ್‌ ಎಚ್‌.ಕೆ.ನರಸಿಂಹಮೂರ್ತಿ ಅವರ ಶಿಷ್ಯರೇ ಆಗಿರುತ್ತಾರೆ. ಇಲ್ಲ ಅಂದರೆ ನರಸಿಂಹ ಮೂರ್ತಿ ಅವರ ಶಿಷ್ಯರ ಶಿಷ್ಯರಾಗಿರುತ್ತಾರೆ. ಕ್ರಿಕೆಟ್‌ ಜ್ವರ ಎನ್ನುವ ಹಾಗೆ ಸಾಂಸ್ಕೃತಿಯ ನಗರಿ ಮೈಸೂರಿನಲ್ಲಿ ಎಚ್‌.ಕೆ ನರಸಿಂಹಮೂರ್ತಿ ಅವರು ವೈಲಿನ್‌ ಜ್ವರ ಹಿಡಿಸಿದ್ದಾರೆ ಎಂದರೂ ತಪ್ಪಲ್ಲ. ಶ್ರೇಷ್ಠ ಸಂಗೀತ ಗುರುವಾಗಿ ಗುರುತಿಸಿಕೊಂಡಿರುವ ಅವರಿಗೆ ದೇಶ, ವಿದೇಶದಲ್ಲಿ ಸಾವಿರಾರು ಶಿಷ್ಯರಿದ್ದಾರೆ. ಅವರ ಶಿಷ್ಯ ಪರಂಪರೆ ಅವರ ಹೃದಯದಷ್ಟೇ ವಿಶಾಲವಾಗಿದೆ.

ಕಛೇರಿಗಳಿಂದ ಬಿಜಿಯಾಗಿದ್ದ ಸಂದರ್ಭದಲ್ಲೂ ನರಸಿಂಹ ಮೂರ್ತಿ ಅವರು ಸಂಗೀತ ಪಾಠ ಮಾಡುವ ಅವಕಾಶವನ್ನು ಎಂದೂ ಕಳೆದುಕೊಂಡವರಲ್ಲ. ವಿದೇಶ ಪ್ರವಾಸಕ್ಕೆ ಹೋದಾಗ ಅಲ್ಲೂ ಅಲ್ಲಿಯ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಬರುತ್ತಾರೆ ಬೆಸ್ಟ್ ವೈಲಿನಿಸ್ಟ್, ಧನುರ್ವೀಣಾ ರತ್ನ, ಗಾನಕಲಾಭಾಸ್ಕರ, ಶ್ರೇಷ್ಠಾಚಾರ್ಯ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿರುವ ಅವರು ಬಿರುದಿಗೆ ತಕ್ಕಂತೆ ಬದುಕುತ್ತಿದ್ದಾರೆ. 40 ವರ್ಷಗಳ ಹಿಂದೆ ನಡೆದ ಒಂದು ತಮಾಷೆ ಘಟನೆಯ ಹಿತಾನುಭವ ಈ ವಾರದ ‘ಜಸ್ಟ್‌ ಮ್ಯೂಸಿಕ್‌ ’ ಸರಣಿಯಲ್ಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ADVERTISEMENT

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.