ADVERTISEMENT

ಜಸ್ಟ್‌ ಮ್ಯೂಸಿಕ್‌–11 | ಮುಂಜಾನೆ ಆಘಾತ, ಸಂಜೆ ಆಶೀರ್ವಾದ!

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 0:50 IST
Last Updated 6 ಮಾರ್ಚ್ 2021, 0:50 IST

ಲಲಿತಸಹಸ್ರನಾಮ ಗಾಯನದ ಮೂಲಕ ಮನೆ–ಮನಗಳಲ್ಲಿ ಭಕ್ತಿಯ ಅಲೆ ತುಂಬಿದವರು ವಿದುಷಿ ಎಂ.ಎಸ್‌.ಶೀಲಾ. ಕರ್ನಾಟಕದ ಎಂ.ಎಸ್‌.ಸುಬ್ಬುಲಕ್ಷ್ಮಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಅವರು ಹಾಡಿರುವ ಶ್ರೀಶಾರದಾ ಸುಪ್ರಭಾತ, ಹರಿದಾಸ ನಮನ, ಸೌಂದರ್ಯ ಲಹರಿ, ವಚನಾಮೃತ ಧ್ವನಿಸುರುಳಿಗಳಿಗೆ ಇಂದಿಗೂ ಅಪಾರ ಬೇಡಿಕೆ ಇದೆ.

ಕರ್ನಾಟಕ ಶಾಸ್ತ್ರೀಯ ಸಂಗೀತದ ದಂತಕತೆ, ದಿಗ್ಗಜ ದಿವಂಗತ ವಿದ್ವಾನ್‌ ಆರ್‌.ಕೆ.ಶ್ರೀಕಂಠನ್‌ ಅವರ ಗುರುಕುಲ ಗರಡಿಯಲ್ಲಿ ಪಳಗಿದವರು. ತಾಯಿ, ವಿದುಷಿ ಎಂ.ಎನ್‌.ರತ್ನಾ ಅವರು ಸ್ವತಃ ಖ್ಯಾತ ಸಂಗೀತಗಾರ್ತಿಯಾಗಿದ್ದರೂ ಶ್ರೀಕಂಠನ್‌ ಅವರ ಗುರುಕುಲಕ್ಕೆ ಸೇರಿಸಿದರು. ಬಹಳ ಸಣ್ಣ ವಯಸ್ಸಿನಲ್ಲಿ ಆರಂಭವಾದ ಅವರ ಸಂಗೀತ ಸುಧೆ ಇಂದಿಗೂ ಹರಿಯುತ್ತಲೇ ಇದೆ.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಆಕಾಶವಾಣಿ ಎ ಟಾಪ್‌ ಗ್ರೇಡ್‌ ಪಡೆದ ಮೊದಲ ಮಹಿಳಾ ಕಲಾವಿದೆ ಇವರು. ಶೃಂಗೇರಿ ಶಾರದಾ ಪೀಠ ಆಸ್ಥಾನ ವಿದುಷಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ– ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದವರು ಅವರನ್ನು ಅರಸಿ ಬಂದಿವೆ. ಹತ್ತಾರು ಬಿರುದುಗಳು ಮುಡಿಗೇರಿವೆ. ವಿದುಷಿ ಶೀಲಾ ಅವರು ಸುಖ–ದುಃಖವನ್ನೊಳಗೊಂಡ ಒಂದು ಅನುಭವವನ್ನು ಹಂಚಿಕೊಂಡಿದ್ದರು. ಅದು ಈ ಸರಣಿಯಲ್ಲಿ ನಿಮ್ಮ ಮುಂದೆ.


ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT