ADVERTISEMENT

ನೋಡಿ: ಗ್ರೀನ್‌ ಟಾಕ್‌ – 7 | ಆಕ್ಸಿಜನ್‌ ಛೇಂಬರ್‌ಗೆ ಕಾಂಕ್ರೀಟ್‌!

​ಪ್ರಜಾವಾಣಿ ವಾರ್ತೆ
Published 5 ಮೇ 2021, 2:45 IST
Last Updated 5 ಮೇ 2021, 2:45 IST

ಸಿಲಿಕಾನ್ ಸಿಟಿ ಆಗುವ ಮುನ್ನ ಬೆಂಗಳೂರನ್ನು ಅದರ ವಾತಾವರಣಕ್ಕಾಗಿಯೇ ಉದ್ಯಾನಗಳ ನಗರಿ, ಏರ್‌ ಕಂಡೀಷನ್‌ ಸಿಟಿ, ಲೇಕ್‌ ಸಿಟಿ, ಗ್ರೀನ್‌ ಸಿಟಿ ಎಂದೆಲ್ಲ ಕರೆಯಲಾಗುತ್ತಿತ್ತು. ಇದಕ್ಕೆ ನಗರದಲ್ಲಿದ್ದ ಕೆರೆಗಳು, ಹಸಿರು ಹೊದಿಕೆಯೇ ಪ್ರಮುಖ ಕಾರಣ. ಬಸವನಗುಡಿ, ಚಾಮರಾಜಪೇಟೆಗಳೂ ಸೇರಿದಂತೆ ನಗರದ ಹಲವು ಪ್ರದೇಶಗಳು ‘ಫ್ರೂಟ್‌ ಗಾರ್ಡನ್‌’ ಎಂಬ ಹೆಸರನ್ನೂ ಪಡೆದಿದ್ದವು. ಏಕೆಂದರೆ ಇಲ್ಲಿ ಪ್ರತಿಯೊಂದು ಮನೆಯ ಆವರಣದಲ್ಲೂ ಹತ್ತಕ್ಕೂ ಹೆಚ್ಚು ಗಿಡಗಳಿದ್ದವು. ಆದರೆ, ಇದೀಗ ಒಂದು ಅಡಿ ಬಿಡದೆ ಎಲ್ಲಕ್ಕೂ ಕಾಂಕ್ರೀಟ್‌ ಸುರಿಯಲಾಗಿದೆ. ಹೀಗಾಗಿಯೇ ಜೀವರಕ್ಷಕ ಆಕ್ಸಿಜನ್‌ಗೆ ಹಾಹಾಕಾರ ಉಂಟಾಗಿದೆ. ನೋಡಿ ಗ್ರೀನ್‌ ಟಾಕ್‌..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.