ADVERTISEMENT

ಸಿಸಿಟಿವಿ ವಿಡಿಯೊ: ಮುಂಬೈ– ರೈಲಿನಲ್ಲಿ ಸಿಲುಕುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಪ್ರಯಾಣಿಕ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 4:40 IST
Last Updated 20 ಸೆಪ್ಟೆಂಬರ್ 2021, 4:40 IST

ಮುಂಬೈ: ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿಗೆ ಈ ಘಟನೆ ಸರಿಯಾಗಿಯೇ ಹೋಲಿಕೆಯಾಗುತ್ತೆ. ತರಾತುರಿಯಲ್ಲಿ ಚಲಿಸುತ್ತಿದ್ದ ರೈಲು ಹತ್ತಲು ಹೋದ ಮಹಿಳೆ ಆಯತಪ್ಪಿ ರೈಲಿನ ಕೆಳಗೆ ಸಿಲುಕುವ ಸಂದರ್ಭ ಸೃಷ್ಟಿಯಾಗಿತ್ತು. ಕೂಡಲೇ ಸ್ಥಳದಲ್ಲಿದ್ದ ಪ್ರಯಾಣಿಕರ ಸಮಯೋಚಿತ ಪ್ರಯತ್ನದಿಂದ ಅವಗಡ ತಪ್ಪಿದೆ. ಮುಂಬೈನ ವಸೈ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.