ADVERTISEMENT

ಎಲ್ಲ ದೇಶಗಳು ಡಬ್ಲ್ಯುಎಚ್‌ಒ ಶಿಫಾರಸುಗಳನ್ನು ಪಾಲಿಸಬೇಕು: ಸೌಮ್ಯ ಸ್ವಾಮಿನಾಥನ್

ಐಎಎನ್ಎಸ್
Published 22 ಸೆಪ್ಟೆಂಬರ್ 2021, 5:53 IST
Last Updated 22 ಸೆಪ್ಟೆಂಬರ್ 2021, 5:53 IST
   

ನವದೆಹಲಿ: ಎಲ್ಲ ದೇಶಗಳು ಡಬ್ಲ್ಯುಎಚ್‌ಒ ಶಿಫಾರಸುಗಳನ್ನು ಅನುಸರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಮಂಗಳವಾರ ಹೇಳಿ್ದ್ದಾರೆ.

ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರನ್ನು ಬ್ರಿಟನ್‌ನಲ್ಲಿ 10 ದಿನ ಕ್ವಾರಂಟೈನ್‌ಗೆ ಒಳಪಡಿಸುತ್ತಿರುವ ಕೋವಿಡ್ -19 ಪ್ರಯಾಣ ನಿಯಮಗಳ ಕುರಿತು ನಡೆಯುತ್ತಿರುವ ಚರ್ಚೆ ಕುರಿತಂತೆ ಐಎಎನ್ಎಸ್ ಜೊತೆ ಮಾತನಾಡಿದ ಅವರು, ‘ಎಲ್ಲ ದೇಶಗಳು ನಮ್ಮ ಶಿಫಾರಸುಗಳನ್ನು ಅನುಸರಿಸಬೇಕು’ಎಂದು ಹೇಳಿದ್ದಾರೆ.

ಬ್ರಿಟನ್ನಿನ ಹೊಸ ಕೋವಿಡ್ ಪ್ರಯಾಣ ನಿಯಮಗಳ ಪ್ರಕಾರ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಭಾರತೀಯ ಪ್ರಯಾಣಿಕರನ್ನು ಲಸಿಕೆ ಹಾಕಿಸಿಕೊಳ್ಳದವರೆಂದು ಪರಿಗಣಿಸಲಾಗುತ್ತಿದೆ. ಜೊತೆಗೆ, ಅವರಿಗೆ 10 ದಿನಗಳವರೆಗೆ ಕ್ವಾರಂಟೈನ್ ವಿಧಿಸಲಾಗುತ್ತಿದೆ.

ADVERTISEMENT

ಯುಎಇ, ಭಾರತ, ಟರ್ಕಿ, ಜೋರ್ಡಾನ್, ಥೈಲ್ಯಾಂಡ್, ರಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಖಂಡಗಳಿಂದ ಬರುವ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳನ್ನು ಲಸಿಕೆ ಹಾಕದವರು ಎಂದು ಪರಿಗಣಿಸಲಾಗುವ ಬ್ರಿಟನ್ನಿನ ಹೊಸ ನಿಯಮವುವಿವಾದಕ್ಕ ನಾಂದಿ ಹಾಡಿದೆ.

ಈ ನಿಟ್ಟಿನಲ್ಲಿ ಡಬ್ಲ್ಯುಎಚ್‌ಒನ ಮುಂದಿನ ನಡೆಯ ಏನು ಎಂಬ ಬಗ್ಗೆ ಕೇಳಿದಾಗ, ನಮ್ಮ ನಿಲುವು ಸ್ಪಷ್ಟವಾಗಿದೆ, ಎಲ್ಲಾ ದೇಶಗಳು ತುರ್ತು ಬಳಕೆಯ ಪಟ್ಟಿಯಲ್ಲಿರುವ ಲಸಿಕೆಗಳನ್ನು ಪರಿಗಣಿಸಬೇಕು ಎಂದು ಸ್ವಾಮಿನಾಥನ್ ಹೇಳಿದ್ದಾರೆ.

ಬ್ರಿಟನ್, ಯುರೋಪ್, ಅಮೆರಿಕದಂತಹ ಲಸಿಕೆ ಕಾರ್ಯಕ್ರಮದಡಿಯಲ್ಲಿ ವಿದೇಶದಲ್ಲಿ ಅನುಮೋದಿತ ಅಸ್ಟ್ರಾಜೆನೆಕಾ, ಫೈಜರ್ ಅಥವಾ ಮಾಡರ್ನಾ ಲಸಿಕೆಯ ಎರಡು ಡೋಸ್, ಜಾನ್ಸೆನ್ ಲಸಿಕೆಯ ಸಿಂಗಲ್ ಡೋಸ್ ಲಸಿಕೆ ಪಡೆದವರನ್ನು ಮಾತ್ರ ಲಸಿಕೆ ಹಾಕಿಸಿಕೊಂಡವರೆಂದು ಬ್ರಿಟನ್ ಪರಿಗಣಿಸುತ್ತದೆ.

ಭಾರತದ ಸಾಮೂಹಿಕ ಲಸಿಕಾ ಕಾರ್ಯಕ್ರಮದಡಿ ಪ್ರಮುಖವಾಗಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಮೂಲಕ ನೀಡಲಾಗುತ್ತಿದೆ. ಕೋವಿಶೀಲ್ಡ್ ಅನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಕಂಪನಿ ಅಭಿವೃದ್ಧಿಪಡಿಸಿದೆ. ಕೋವಾಕ್ಸಿನ್ ಅನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.