ADVERTISEMENT

ಆಸ್ಟ್ರೇಲಿಯಾ: ಕ್ಯಾನ್‌ಬೆರಾದಲ್ಲಿ ಅ.15ರವರೆಗೆ ಲಾಕ್‌ಡೌನ್ ವಿಸ್ತರಣೆ

ಏಜೆನ್ಸೀಸ್
Published 14 ಸೆಪ್ಟೆಂಬರ್ 2021, 8:05 IST
Last Updated 14 ಸೆಪ್ಟೆಂಬರ್ 2021, 8:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್‌ಬೆರಾದಲ್ಲಿ ಹೊಸದಾಗಿ 22 ಕೋವಿಡ್‌ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಅಕ್ಟೋಬರ್ 15 ರವರೆಗೆ ಲಾಕ್‌ಡೌನ್‌ ವಿಸ್ತರಿಸಿದೆ.

ಈ ಹಿಂದೆ ಸಿಡ್ನಿಯಲ್ಲಿ ಕೊರೊನಾದ ‘ಡೆಲ್ಟಾ‘ ರೂಪಾಂತರ ಸೋಂಕಿನ ಒಂದು ಪ್ರಕರಣ ಪತ್ತೆಯದಾಗ ಆಗಸ್ಟ್‌ 12 ರಿಂದ ಲಾಕ್‌ಡೌನ್ ಘೋಷಿಸಲಾಗಿತ್ತು. ನಂತರ ಅದನ್ನು ಮುಂದುವರಿಸಲಾಗಿತ್ತು. ಈಗ ಪುನಃ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಮುಖ್ಯಮಂತ್ರಿ ಆಂಡ್ರೀವ್‌ ಬಾರ್‌, ಅಕ್ಟೋಬರ್ 15 ರವರೆಗೆ ಲಾಕ್‌ಡೌನ್‌ ವಿಸ್ತರಿಸಿರುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ.

ಕ್ಯಾನಬೆರಾವನ್ನು ನ್ಯೂ ಸೌತ್ ವೇಲ್ಸ್ ರಾಜ್ಯ ಸುತ್ತುವರಿದಿದೆ. ಈ ರಾಜ್ಯದ ಲಿಮೌಸಿನ್‌ ನಗರದಲ್ಲಿ ಜೂ. 16ರಂದು ಟ್ಯಾಕ್ಸಿ ಚಾಲಕನೊಬ್ಬನಲ್ಲಿ ಕೋವಿಡ್‌–ಡೆಲ್ಟಾ ರೂಪಾಂತರ ಸೋಂಕು ಪತ್ತೆಯಾಗಿತ್ತು. ಇದಾದ ನಂತರ ಜೂ. 26 ರಿಂದ ಸಿಡ್ನಿ ನಗರವನ್ನು ಲಾಕ್‌ಡೌನ್‌ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.