ADVERTISEMENT

ಕೆನಡಾ ಉದ್ಯಮಿಗೆ ಚೀನಾದಲ್ಲಿ 13 ವರ್ಷ ಜೈಲು

ಏಜೆನ್ಸೀಸ್
Published 19 ಆಗಸ್ಟ್ 2022, 22:01 IST
Last Updated 19 ಆಗಸ್ಟ್ 2022, 22:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌:ಬಹುಕೋಟಿಡಾಲರ್ (8.1 ಬಿಲಿಯನ್‌) ಹಣಕಾಸು ಅಪರಾಧಗಳ ಪ್ರಕರಣ ಸಂಬಂಧ2017ರಲ್ಲಿ ಹಾಂಗ್‌ಕಾಂಗ್‌ನಿಂದ ನಾಪತ್ತೆಯಾಗಿದ್ದ ಚೀನಾ ಮೂಲದ ಕೆನಡಾ ಉದ್ಯಮಿಗೆ 13 ವರ್ಷಗಳ ಜೈಲು ಶಿಕ್ಷೆಯನ್ನು ಚೀನಾ ಕೋರ್ಟ್‌ ಶುಕ್ರವಾರ ವಿಧಿಸಿದೆ.

ಷಿಯೊ ಜಿಯಾನ್ಹುವಾಶಿಕ್ಷೆಗೆ ಗುರಿಯಾದ ಉದ್ಯಮಿ. ಇವರು ತಮ್ಮ ನಿಯಂತ್ರಣದ ‘ಟುಮಾರೊ ಗ್ರೂಪ್‌’ ಮೂಲಕ ಬ್ಯಾಂಕಿನಲ್ಲಿ ಸಾರ್ವಜನಿಕರು ಇಟ್ಟಿದ್ದ ಠೇವಣಿ ಹಣವನ್ನು ದುರುಪಯೋಗ ಪಡಿಸಿಕೊಂಡ ಮತ್ತು ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣದಲ್ಲಿ ಶಾಂಘೈನ ಜನತಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಷಿಯೊ ಅವರಿಗೆ 6.5 ದಶಲಕ್ಷ ಯುವಾನ್ ಮತ್ತು ಇವರ ಕಂಪನಿಗೆ 55 ಶತಕೋಟಿ ಯುವಾನ್ ದಂಡ ವಿಧಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ADVERTISEMENT

ಷಿಯೊ2017ರ ಜನವರಿಯಲ್ಲಿ ಹಾಂಗ್‌ಕಾಂಗ್ ಹೋಟೆಲ್‌ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಚೀನಾದ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ತಮ್ಮ ದೇಶಕ್ಕೆ ಕರೆದೊಯ್ದಿದ್ದು, ತನಿಖಾಧಿಕಾರಿಗಳ ವಿಚಾರಣೆಯಲ್ಲಿದ್ದಾರೆ ಎಂದು ಹೇಳಲಾಗಿದೆ.ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.