ADVERTISEMENT

ಬಾಹ್ಯಾಕಾಶಕ್ಕೆ ಸಾಮಗ್ರಿ ರವಾನೆ: ಚೀನಾದ ಮಾನವ ರಹಿತ ನೌಕೆ ಯಶಸ್ವಿ ಉಡ್ಡಯನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 14:37 IST
Last Updated 20 ಸೆಪ್ಟೆಂಬರ್ 2021, 14:37 IST
 ಚೀನಾ ಮಾನವ ರಹಿತ ಸರಕು ಹೊತ್ತ ಬಾಹ್ಯಾಕಾಶ ನೌಕೆಯನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಚೀನಾ ಮಾನವ ರಹಿತ ಸರಕು ಹೊತ್ತ ಬಾಹ್ಯಾಕಾಶ ನೌಕೆಯನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.   

ಬೀಜಿಂಗ್(ಪಿಟಿಐ): ಮುಂದಿನ ವರ್ಷದ ವೇಳೆಗೆ ಪೂರ್ಣಗೊಳ್ಳಲಿರುವ ನಿರ್ಮಾಣ ಹಂತದಲ್ಲಿರುವತನ್ನ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಗ್ರಿ ಸರಬರಾಜು ಮಾಡಲು ಚೀನಾ ಮಾನವ ರಹಿತ ಸರಕು ಹೊತ್ತ ಬಾಹ್ಯಾಕಾಶ ನೌಕೆಯನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಟಿಯಾನ್‌ಜೌ–3 ಹೆಸರಿನ ನೌಕೆಯನ್ನು ಹೊತ್ತ ಲಾಂಗ್ ಮಾರ್ಚ್ -7 ವೈ 4 ರಾಕೆಟ್ ಅನ್ನು ಹೈನಾನ್‌ನದಕ್ಷಿಣ ದ್ವೀಪ ಪ್ರಾಂತ್ಯದಲ್ಲಿನ ವೆಂಚಾಂಗ್ ಬಾಹ್ಯಾಕಾಶ ಉಡಾವಣಾ ನೆಲೆಯಿಂದ ಉಡ್ಡಯನ ಮಾಡಲಾಯಿತು ಎಂದು ಚೀನಾದ ಮಾನವ ಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್ಎ) ಹೇಳಿದೆ.

ಟಿಯಾನ್‌ಜೌ ಸರಣಿಯ ಈ ನೌಕೆಯು ಬಾಹ್ಯಾಕಾಶ ನಿಲ್ದಾಣದ ಕೋರ್ ಮಾಡ್ಯೂಲ್ ಅನ್ನು ಹೊತ್ತೊಯ್ಯುತ್ತಿದ್ದು, ಮುಂದಿನ ವರ್ಷದ ವೇಳೆಗೆ ಸಿದ್ಧವಾಗಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಗ್ರಿಗಳನ್ನು ಸಾಗಿಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.