ADVERTISEMENT

ಜನಸಾಮಾನ್ಯರಿಗೆ ಬೂಸ್ಟರ್ ಡೋಸ್ ಅಗತ್ಯವಿಲ್ಲ: ವಿಜ್ಞಾನಿಗಳ ಅಭಿಮತ

‘ದಿ ಲ್ಯಾನ್ಸೆಟ್‌’ ವರದಿ

ಪಿಟಿಐ
Published 13 ಸೆಪ್ಟೆಂಬರ್ 2021, 15:40 IST
Last Updated 13 ಸೆಪ್ಟೆಂಬರ್ 2021, 15:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಜನಸಾಮಾನ್ಯರಿಗೆ ಕೋವಿಡ್ ಬೂಸ್ಟರ್ ಡೋಸ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿಗಳು ವಿಶ್ವಾಸಾರ್ಹವಾದ ಪುರಾವೆಗಳನ್ನು ಒದಗಿಸಿಲ್ಲ’ ಎಂದು ‘ದಿ ಲ್ಯಾನ್ಸೆಟ್’ನಲ್ಲಿ ಪ್ರಕಟವಾದ ವರದಿಯೊಂದು ಹೇಳಿದೆ.

ಆಹಾರ ಮತ್ತು ಔಷಧ ಆಡಳಿತ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಕೆಲ ಪರಿಣತರನ್ನೊಳಗೊಂಡ ಅಂತರಾಷ್ಟ್ರೀಯ ವಿಜ್ಞಾನಿಗಳ ಗುಂಪೊಂದು ಪ್ರಕಟಿಸಿರುವ ವಿಮರ್ಶಾ ವರದಿಯಲ್ಲಿ ಈ ಅಂಶವನ್ನು ಪ್ರತಿಪಾದಿಸಲಾಗಿದೆ.

‘ವಿಶ್ವಾದಾದ್ಯಂತ ಲಸಿಕೆ ಹಾಕದ ಕೋಟ್ಯಂತರ ಜನರನ್ನು ರಕ್ಷಿಸಲು ಬೂಸ್ಟರ್ ಡೋಸ್‌ಗಳನ್ನು ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಕೆಲವು ಜನರಿಗೆ ಮಾತ್ರ ಬೂಸ್ಟರ್‌ಗಳು ಉಪಯುಕ್ತವಾಗಬಹುದು, ಆದರೆ ಸಾಮಾನ್ಯ ಜನರಿಗೆ ಇದರ ಅಗತ್ಯ ಇನ್ನೂ ಇಲ್ಲ’ ಎಂದು ವಿಜ್ಞಾನಿಗಳು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ADVERTISEMENT

ಕೋವ್ಯಾಕ್ಸಿನ್‌ಗೆ ಈ ತಿಂಗಳಲ್ಲಿ ಡಬ್ಲ್ಯುಎಚ್‌ಒ ಅನುಮತಿ?

ನವದೆಹಲಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಇದೇ ತಿಂಗಳು ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ಡಬ್ಲ್ಯುಎಚ್‌ಒ ಇಲ್ಲಿಯವರೆಗೆ ಫೈಜರ್-ಬಯೋಟೆಕ್, ಯುಎಸ್ ಫಾರ್ಮಾ ಮೇಜರ್ಸ್‌ನ ಜಾನ್ಸನ್ ಮತ್ತು ಜಾನ್ಸನ್, ಮಾಡರ್ನಾ, ಚೀನಾದ ಸಿನೋಫಾರ್ಮ್ ಮತ್ತು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಗಳನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.