ADVERTISEMENT

ಕಂಪನಿಗೆ ವಂಚನೆ: ಭಾರತೀಯ ಮೂಲದ ಮಾಜಿ ಐಟಿ ಉದ್ಯೋಗಿ ಮೇಲಿನ ಆರೋಪ ಸಾಬೀತು

ಪಿಟಿಐ
Published 18 ಸೆಪ್ಟೆಂಬರ್ 2021, 11:50 IST
Last Updated 18 ಸೆಪ್ಟೆಂಬರ್ 2021, 11:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕದ ನಿವಾಸಿ, ಮಾಹಿತಿ ತಂತ್ರಜ್ಞಾನ ಕಂಪನಿಯೊಂದರ ಮಾಜಿ ಉದ್ಯೋಗಿ ವಿರುದ್ಧ ವಂಚನೆಗಾಗಿ ಸಂಚು ರೂಪಿಸಿರುವುದು ಹಾಗೂ ಸುಳ್ಳು ತೆರಿಗೆ ವರದಿ ತಯಾರಿಕೆಗೆ ನೆರವಾಗಿರುವ ಆರೋಪಗಳು ಸಾಬೀತಾಗಿವೆ.

ಪ್ರಕರಣದ ಆರೋಪಿ ದಯಾಕರ್ ಮಲ್ಲು(51) ಕಂಪನಿಗೆ ವಂಚನೆ ಮಾಡಲು ಸಂಚು ರೂಪಿಸಿಕ್ಕಾಗಿ 25 ವರ್ಷಗಳ ಜೈಲು ಶಿಕ್ಷೆ ಮತ್ತು ತೆರಿಗೆ ವಂಚನೆಗೆ ನೆರವಾಗಿದ್ದಕ್ಕಾಗಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ನ್ಯಾಯಾಲಯಗಳ ದಾಖಲೆಗಳ ಪ್ರಕಾರ, 2017 ಮತ್ತು 2019ರ ನಡುವೆ ತಾನು ಉಪಾಧ್ಯಕ್ಷನಾಗಿದ್ದ ಮೈಲಾನ್ ಗ್ಲೋಬಲ್ ಆಪರೇಷನ್‌ ಇನ್‌ಫಾರ್ಮೇಷನ್ ಟೆಕ್ನಾಲಜಿ ಕಂಪನಿಗೆ, ಮತ್ತೊಬ್ಬನೊಂದಿಗೆ ಸೇರಿ ವಂಚನೆ ಮಾಡಿದ್ದಾರೆಂದು ಉಲ್ಲೇಖಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.