ADVERTISEMENT

ಗಾಜಾಪಟ್ಟಿಯಲ್ಲಿರುವ ಹಮಾಸ್ ಉಗ್ರತಾಣಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2021, 5:04 IST
Last Updated 11 ಸೆಪ್ಟೆಂಬರ್ 2021, 5:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಜೆರುಸಲೇಮ್‌: ಹಮಾಸ್‌ ಉಗ್ರರು ಶುಕ್ರವಾರ ರಾತ್ರಿ ನಡೆಸಿದ ಬಾಂಬ್‌ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಸೈನ್ಯವು ರಾಕೆಟ್‌ ದಾಳಿ ನಡೆಸಿದೆ.

'ನಮ್ಮ ಯುದ್ಧ ವಿಮಾನಗಳು ಗಾಜಾದ ಹಮಾಸ್ ಉಗ್ರತಾಣಗಳ ಮೇಲೆ ದಾಳಿ ನಡೆಸಿವೆ' ಎಂದು ಇಸ್ರೇಲ್‌ ಸೇನೆಯ ವಕ್ತಾರರು ಶನಿವಾರ ಬೆಳಿಗ್ಗೆ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ಇಸ್ರೇಲ್‌ ಜೈಲಿನಿಂದ ತಪ್ಪಿಸಿಕೊಂಡಿದ್ದ ಇಬ್ಬರು ಹಮಾಸ್‌ ಉಗ್ರರನ್ನು ಪೊಲೀಸರು ಸೆರೆಹಿಡಿದ ಕೆಲವೇ ಗಂಟೆಗಳಲ್ಲಿ ದಾಳಿ ಮತ್ತು ಪ್ರತಿದಾಳಿಗಳು ನಡೆದಿವೆ ಎಂದು ತಿಳಿದುಬಂದಿದೆ.

ADVERTISEMENT

ಮೇ ತಿಂಗಳಲ್ಲಿ ಹಮಾಸ್‌ ಉಗ್ರರು ಹಾಗೂ ಇಸ್ರೇಲ್‌ ಮಿಲಿಟರಿ ಮಧ್ಯೆ 11 ದಿನಗಳ ಕಾಲ ಸಂಘರ್ಷ ನಡೆದಿತ್ತು. ನಂತರ, ಕದನ ವಿರಾಮ ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.