ADVERTISEMENT

ಜಪಾನ್‌ನಲ್ಲಿ ‘ಕೋವಿಡ್‌ ತುರ್ತುಪರಿಸ್ಥಿತಿ ನಿರ್ಬಂಧ ತೆರವಿಗೆ ಸಿದ್ಧತೆ

ಪ್ರಧಾನಿ ಯೋಶಿಹಿಡೆ ಸುಗಾ ಶೀಘ್ರದಲ್ಲೇ ನಿರ್ಬಂಧ ತೆರವು ಪ್ರಕಟಿಸುವ ಸಾಧ್ಯತೆ

ಏಜೆನ್ಸೀಸ್
Published 17 ಜೂನ್ 2021, 6:24 IST
Last Updated 17 ಜೂನ್ 2021, 6:24 IST
ಯೋಗಶಿಹಿಡೆ ಸುಗಾ
ಯೋಗಶಿಹಿಡೆ ಸುಗಾ   

ಟೊಕಿಯೊ: ಜಪಾನ್‌ನಲ್ಲಿ ಒಲಿಂಪಿಕ್ಸ್‌ ಕ್ರೀಡಾ ಕೂಟ ಆರಂಭವಾಗಲು ತಿಂಗಳಷ್ಟೆ ಬಾಕಿ ಇದ್ದು, ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಈ ಮಧ್ಯೆ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಗುತ್ತಿದ್ದು, ಈ ವಾರಾಂತ್ಯದಲ್ಲಿ ಕೋವಿಡ್‌ ತುರ್ತು ಪರಿಸ್ಥಿತಿಯ ನಿರ್ಬಂಧ ತೆರವುಗೊಳಿಸುವ ಸಾಧ್ಯತೆ ಇದೆ.

ರೂಪಾಂತರ ವೈರಸ್‌ಗಳಿಂದ ಉಲ್ಬಣವಾಗುತ್ತಿದ್ದ ಕೊರೊನಾ ಸೋಂಕಿನ ತೀವ್ರತೆಯನ್ನು ನಿಯಂತ್ರಿಸಲು ಜಪಾನ್‌ ಕಳೆದ ಮಾರ್ಚ್‌ ತಿಂಗಳಿನಿಂದಲೂ ಹರಸಾಹಸಪಡುತ್ತಿದೆ. ಒಂದು ಹಂತದಲ್ಲಿ ದೈನಂದಿನ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ 7 ಸಾವಿರ ದಾಟಿತ್ತು. ಟೊಕಿಯೊ, ಒಸಾಕಾ ಮತ್ತು ಇತರೆ ಮೆಟ್ರೊಪಾಲಿಟನ್ ನಗರಗಳಲ್ಲಿನ ಆಸ್ಪತ್ರೆಗಳು ಸೋಂಕು ಪೀಡಿತರಿಂದ ತುಂಬಿ ಹೋಗಿದ್ದವು.

ಇತ್ತೀಚೆಗೆ ನಿತ್ಯದ ಸೋಂಕಿನ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ಪ್ರಧಾನಿ ಯೋಶಿಹಿಡೆ ಸುಗಾ ಅವರು ಸರಳ ನಿರ್ಬಂಧಗಳನ್ನು ಉಳಿಸಿಕೊಂಡು, ದೇಶದಲ್ಲಿ ಈಗ ಜಾರಿಯಲ್ಲಿರುವ ಕೋವಿಡ್ ತುರ್ತುಪರಿಸ್ಥಿತಿ ನಿರ್ಬಂಧವನ್ನು ಭಾನುವಾರ ತೆರವುಗೊಳಿಸುವ ನಿರೀಕ್ಷೆ ಇದೆ.

ADVERTISEMENT

ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ವೈದ್ಯಕೀಯ ತಜ್ಞರು ಮತ್ತು ಸಾರ್ವಜನಿಕರು ವ್ಯಕ್ತಪಡಿಸುತ್ತಿರುವ ಕಳವಳಗಳ ಹೊರತಾಗಿಯೂ, ಜುಲೈ 23 ರಿಂದ ‘ಸುರಕ್ಷಿತ ಮತ್ತು ಭದ್ರತೆ‘ಯೊಂದಿಗೆ ಕ್ರೀಡಾಕೂಟವನ್ನು ನಡೆಸಲು ನಿರ್ಧರಿಸಿದ್ದೇವೆ ಎಂದು ಸುಗಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.