ADVERTISEMENT

ರಷ್ಯಾ: ಆರು ಜನರಿದ್ದ ಮಿಲಿಟರಿ ವಿಮಾನ ಕಣ್ಮರೆ

ಏಜೆನ್ಸೀಸ್
Published 22 ಸೆಪ್ಟೆಂಬರ್ 2021, 12:56 IST
Last Updated 22 ಸೆಪ್ಟೆಂಬರ್ 2021, 12:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಸ್ಕೊ: ಖಬರೊಸ್ಕವ್‌ ನಗರದ ಪೂರ್ವ ಪ್ರದೇಶದಿಂದ ಆರು ಜನರಿದ್ದ ರಷ್ಯಾದ ಎಎನ್‌–26 ಮಿಲಿಟರಿ ವಿಮಾನವು ಬುಧವಾರ ಕಣ್ಮರೆಯಾಗಿದೆ.

‘ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 6.45ರ ವೇಳೆಗೆ ಖಬರೊಸ್ಕವ್‌ ವಿಮಾನನಿಲ್ದಾಣದ 38 ಕಿ.ಮೀ. ವ್ಯಾಪ್ತಿಯ ರಾಡಾರ್‌ನಿಂದ ಎಎನ್‌–26 ಮಿಲಿಟರಿ ವಿಮಾನವು ಸಂಪರ್ಕ ಕಳೆದುಕೊಂಡು, ಕಣ್ಮರೆಯಾಗಿದೆ’ ಎಂದು ಸಚಿವಾಲಯವು ಮಾಹಿತಿ ನೀಡಿದೆ.

‘ವಿಮಾನವನ್ನು ಪತ್ತೆ ಹಚ್ಚಲು ಹೆಲಿಕಾಪ್ಟರ್ ಕಳುಹಿಸಲಾಗಿದೆ. ಆದರೆ, ಕತ್ತಲು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಹುಡುಕಾಟ ಕಾರ್ಯವು ಜಟಿಲವಾಗಿದೆ’ ಎಂದೂ ಸಚಿವಾಲಯವು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.