ADVERTISEMENT

ನೊಬೆಲ್‌ 2020: ಅಮೆರಿಕದ ಕವಯತ್ರಿಗೆ ಸಾಹಿತ್ಯ ವಿಭಾಗದ ಪ್ರಶಸ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2020, 11:36 IST
Last Updated 8 ಅಕ್ಟೋಬರ್ 2020, 11:36 IST
 ಕವಯತ್ರಿ ಲೂಯಿಸ್‌ ಗ್ಲುಕ್ಸ್‌
ಕವಯತ್ರಿ ಲೂಯಿಸ್‌ ಗ್ಲುಕ್ಸ್‌    

ಸ್ಟಾಕ್‌ಹೋಮ್‌: 2020ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್‌ ಪ್ರಶಸ್ತಿ ಗುರುವಾರ ಘೋಷಣೆಯಾಗಿದೆ. ಅಮೆರಿಕದ ಕವಯತ್ರಿ ಲೂಯಿಸ್‌ ಗ್ಲುಕ್ಸ್‌ ಅವರನ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

1968ರಲ್ಲಿ 'ಫಸ್ಟ್‌ಬಾರ್ನ್‌' (Firstborn) ಕವನ ಸಂಕಲನದ ಮೂಲಕ ಸಾಹಿತ್ಯ ಜಗತ್ತಿಗೆ ಲೂಯಿಸ್ ಪ್ರವೇಶಿಸಿದರು. ಅಮೆರಿಕದ ಸಮಕಾಲೀನ ಸಾಹಿತ್ಯದಲ್ಲಿ ಬಹುಬೇಗ ಗುರುತಿಸಿಕೊಂಡರು. ಅವರು ಈವರೆಗೂ ಹನ್ನೆರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ ಹಾಗೂ ಕವನಗಳ ಕುರಿತು ಹಲವು ಪ್ರಬಂಧಗಳನ್ನು ಬರೆದಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿ 1943ರಲ್ಲಿ ಜನಿಸಿದ ಲೂಯಿಸ್‌ ಅವರು ಮ್ಯಾಸುಚೂಸೆಟ್ಸ್‌ನ ಕೇಂಬ್ರಿಡ್ಜ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಯೇಲ್‌ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್‌ ಪ್ರೊಫೆಸರ್‌ ಆಗಿದ್ದಾರೆ.

ADVERTISEMENT

ಲೂಯಿಸ್‌ ಅವರ ಜನಪ್ರಿಯ ಕವನ ಸಂಕಲನ 'ದಿ ವೈಲ್ಡ್‌ ಐರಿಸ್‌' (1992). ಇದೇ ಕವನ ಸಂಕಲನಕ್ಕೆ ಪತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿಯೂ ಸಂದಿದೆ. ಬಾಲ್ಯ ಮತ್ತು ಕೌಟುಂಬಿಕ ಜೀವನ, ಪಾಲಕರು ಹಾಗೂ ಒಡಹುಟ್ಟಿದವರೊಂದಿಗಿನ ಆಪ್ತ ಸಂಬಂಧಗಳ ಸುತ್ತ ಹೆಚ್ಚಿನ ಕವನಗಳ ವಿಷಯವಾಗಿದೆ.

ಇತರೆ ಕವನ ಸಂಕಲನಗಳು:
* ‘Averno’ (2006)
* ‘Faithful and Virtuous Night’ (2014)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.