ADVERTISEMENT

ಉತ್ತರ ಕೊರಿಯಾದಿಂದ ದೂರಗಾಮಿ ಕ್ರೂಸ್ ಕ್ಷಿಪಣಿ ಪರೀಕ್ಷೆ

ಏಜೆನ್ಸೀಸ್
Published 13 ಸೆಪ್ಟೆಂಬರ್ 2021, 2:38 IST
Last Updated 13 ಸೆಪ್ಟೆಂಬರ್ 2021, 2:38 IST
ಚಿತ್ರ ಕೃಪೆ: Reuters/KCNA Photo
ಚಿತ್ರ ಕೃಪೆ: Reuters/KCNA Photo   

ಸಿಯೋಲ್: ಉತ್ತರ ಕೊರಿಯಾವು ದೂರಗಾಮಿ ಕ್ರೂಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ನಡೆಸಿದೆ ಎಂದು ಅಲ್ಲಿನ ಮಾಧ್ಯಮವು ವರದಿ ಮಾಡಿದೆ.

ಅಮೆರಿಕ ವಿರುದ್ಧ ದೀರ್ಘಕಾಲದಿಂದ ಸಂಘರ್ಷದಲ್ಲಿರುವ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಬಲವನ್ನು ಹೆಚ್ಚಿಸಿಕೊಳ್ಳುವ ಭಾಗವಾಗಿ ಕ್ಷಿಪಣಿ ಪ್ರಯೋಗ ನಡೆಸಿದೆ.

ನೂತನ ಕ್ಷಿಪಣಿ ಪರೀಕ್ಷೆಯೊಂದಿಗೆ ಉತ್ತರ ಕೊರಿಯಾ ಶಸ್ತ್ರಾಸ್ತ್ರ ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೂತನ ಕ್ಷಿಪಣಿ ರಕ್ಷಣಾ ವಲಯವನ್ನು ಬೇಧಿಸುವ ಸಾಮರ್ಥ್ಯವನ್ನು ಹೊಂದಿದೆ.

ADVERTISEMENT

ಶನಿವಾರ ಹಾಗೂ ಭಾನುವಾರದಂದು ನಡೆಸಲಾದ ಪರೀಕ್ಷೆಯಲ್ಲಿ ಕ್ಷಿಪಣಿಯು 1,500 ಕಿ.ಮೀ. ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಜಾಗತಿಕ ಮಟ್ಟದ ನಿರ್ಬಂಧ ಹಾಗೂ ತೀವ್ರ ಒತ್ತಡದ ನಡುವೆಯೂ ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿಗಳ ಪ್ರಯೋಗ ನಡೆಸುತ್ತಲೇ ಬಂದಿರುವ ಉತ್ತರ ಕೊರಿಯಾ, ರಕ್ಷಣಾ ವಲಯದಲ್ಲಿ ಬಲವೃದ್ಧಿಸಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.