ADVERTISEMENT

ಇಸ್ಲಾಮಾಬಾದ್‌ನಿಂದ ಕಾಬೂಲ್‌ಗೆ ಮುಂದಿನ ವಾರದಿಂದ ವಿಮಾನಯಾನ ಸೇವೆ ಪುನರಾರಂಭ

ಏಜೆನ್ಸೀಸ್
Published 11 ಸೆಪ್ಟೆಂಬರ್ 2021, 7:44 IST
Last Updated 11 ಸೆಪ್ಟೆಂಬರ್ 2021, 7:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್: ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) ಮುಂದಿನ ವಾರ ಇಸ್ಲಾಮಾಬಾದ್‌ನಿಂದ ಕಾಬೂಲ್‌ಗೆ ವಿಮಾನಯಾನವನ್ನು ಪುನರಾರಂಭಿಸಲಿದೆ ಎಂದು ಏರ್‌ಲೈನ್ ವಕ್ತಾರರು ಶನಿವಾರ ಎಎಫ್‌ಪಿಗೆ ತಿಳಿಸಿದ್ದಾರೆ.

ಕಳೆದ ತಿಂಗಳು ತಾಲಿಬಾನ್ ಅಫ್ಗಾನಿಸ್ತಾನದ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಆರಂಭಗೊಂಡ ಮೊದಲ ವಿದೇಶಿ ವಾಣಿಜ್ಯ ಸೇವೆ ಇದಾಗಿದೆ.

'ವಿಮಾನ ಕಾರ್ಯಾಚರಣೆಗಾಗಿ ನಾವು ಎಲ್ಲಾ ರೀತಿಯ ತಾಂತ್ರಿಕ ಅನುಮತಿಗಳನ್ನು ಪಡೆದುಕೊಂಡಿದ್ದೇವೆ. ನಮ್ಮ ಮೊದಲ ವಾಣಿಜ್ಯ ವಿಮಾನ ಏರ್‌ಬಸ್ A320 ಸೆಪ್ಟೆಂಬರ್ 13 ರಂದು ಇಸ್ಲಾಮಾಬಾದ್‌ನಿಂದ ಕಾಬೂಲ್‌ಗೆ ಹಾರಲು ಸಿದ್ಧವಾಗಿದೆ' ಎಂದು ಪಿಐಎ ವಕ್ತಾರ ಅಬ್ದುಲ್ಲಾ ಹಫೀಜ್ ಖಾನ್ ತಿಳಿಸಿದ್ದಾರೆ.

ADVERTISEMENT

ತಾಲಿಬಾನ್ ಉಗ್ರರಿಂದಾಗಿ ನೆರೆಯ ಅಫ್ಗಾನಿಸ್ತಾನಕ್ಕೆ ವಿಮಾನ ಸೇವೆಯನ್ನು ಪಾಕಿಸ್ತಾನ ಸರ್ಕಾರ ಆಗಸ್ಟ್‌ನಲ್ಲಿ ತಾತ್ಕಾಲಿಕವಾಗಿ ರದ್ದು ಮಾಡಿತ್ತು. ಪಾಕಿಸ್ತಾನ ಸರ್ಕಾರಿ ಸ್ವಾಮ್ಯದ ಪಿಐಎ ಅಪ್ಗಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ವಿಮಾನ ಸೇವೆ ಒದಗಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.