ADVERTISEMENT

ಸಿರಿಯಾ: ರಾಕೆಟ್‌ ದಾಳಿ, 10 ಸಾವು 

ಏಜೆನ್ಸೀಸ್
Published 19 ಆಗಸ್ಟ್ 2022, 14:00 IST
Last Updated 19 ಆಗಸ್ಟ್ 2022, 14:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೈರುತ್: ಟರ್ಕಿ ಬೆಂಬಲಿತ ಹೋರಾಟಗಾರರು ಉತ್ತರ ಸಿರಿಯಾದ ಜನನಿಬಿಡ ಮಾರುಕಟ್ಟೆಯ ಮೇಲೆ ನಡೆಸಿದ ರಾಕೆಟ್ ದಾಳಿಯಲ್ಲಿ 10 ಜನರು ಮೃತಪಟ್ಟು, 30 ಮಂದಿ ಗಾಯಗೊಂಡಿದ್ದಾರೆ ಎಂದು ಅರೆ ವೈದ್ಯಕೀಯ ಗುಂಪು ವರದಿ ಮಾಡಿದೆ.

ಇತ್ತೀಚೆಗೆ ಟರ್ಕಿ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಸಿರಿಯನ್ ಪಡೆಗಳು ಮತ್ತು ಯುಎಸ್ ಬೆಂಬಲಿತ ಕುರ್ದಿಶ್ ಹೋರಾಟಗಾರರು ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಅಲ್-ಬಾಬ್ ಪಟ್ಟಣದ ಮೇಲೆ ಈ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT