ADVERTISEMENT

ಶ್ರೀಲಂಕಾ: ಅಕ್ಟೋಬರ್ 1ವರೆಗೆ ಲಾಕ್‌ಡೌನ್‌ ವಿಸ್ತರಣೆ

ಪಿಟಿಐ
Published 17 ಸೆಪ್ಟೆಂಬರ್ 2021, 12:43 IST
Last Updated 17 ಸೆಪ್ಟೆಂಬರ್ 2021, 12:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲಂಬೊ: ಶ್ರೀಲಂಕಾದಲ್ಲಿ ದೇಶವ್ಯಾಪಿ ವಿಧಿಸಲಾಗಿದ್ದ ಲಾಕ್‌ಡೌನ್‌ನನ್ನು ಅಕ್ಟೋಬರ್ 1ರವರೆಗೆ ವಿಸ್ತರಿಸಿ ಶುಕ್ರವಾರ ಆದೇಶಿಸಲಾಗಿದೆ.

ಅಧ್ಯಕ್ಷ ಗೋಟಬಯ ರಾಜಪಕ್ಸ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯು ಈ ನಿರ್ಧಾರ ತೆಗೆದುಕೊಂಡಿತು. ಕೋವಿಡ್ ಪ್ರಕರಣಗಳ ಏರಿಕೆ, ವೈದ್ಯ ಕ್ಷೇತ್ರದ ಪ್ರಮುಖರ ಒತ್ತಾಯ ಇದಕ್ಕೆ ಕಾರಣವಾಗಿದೆ.

ಈ ಹಿಂದೆ 10 ದಿನದ ಲಾಕ್‌ಡೌನ್ ಅನ್ನು ಆಗಸ್ಟ್‌ 20ರಂದು ಘೋಷಿಸಿದ್ದು, ಸೆ. 21ರಂದು ಹಿಂಪಡೆಯಲಾಗಿತ್ತು. ತದನಂತರ ದೇಶದಲ್ಲಿ ಕೋವಿಡ್ ಪ್ರಕರಣಗಳು, ಸಾವು ಏರಿಕೆಯಾಗಿರುವ ವರದಿಗಳಿದ್ದವು.

ADVERTISEMENT

ಶ್ರೀಲಂಕಾದಲ್ಲಿ ಕೋವಿಡ್ ಮೂರನೇ ಅಲೆ ಏಪ್ರಿಲ್‌ ಮಧ್ಯಭಾಗದಿಂದ ಬಾಧಿಸುತ್ತಿದೆ. ಏಪ್ರಿಲ್‌ 30ರ ವೇಳೆಗೆ 700ರಷ್ಟಿದ್ದ ಸಾವು ಪ್ರಕರಣಗಳು ಗುರುವಾರದ ವೇಳೆಗೆ 12 ಸಾವಿರದ ಗಡಿ ದಾಟಿವೆ.ಆರೋಗ್ಯ ಸೇವೆಗಳ ಉಪನಿರ್ದೇಶಕ ಹೇಮಂತ ಹೆರತ್ ಅವರ ಪ್ರಕಾರ, ಪ್ರಸ್ತತ ನಿತ್ಯ 2,300 ಹೊಸ ಪ್ರಕರಣಗಳು ದಾಖಲಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.