ADVERTISEMENT

ಸಂಬಳ ಕೊಡಲು ನೋಟು ಮುದ್ರಣ, ‘ಶ್ರೀಲಂಕನ್ ಏರ್‌ಲೈನ್ಸ್‌’ ಮಾರಾಟದ ಚಿಂತನೆ

ಪಿಟಿಐ
Published 17 ಮೇ 2022, 10:43 IST
Last Updated 17 ಮೇ 2022, 10:43 IST
ಶ್ರೀಲಂಕಾದ ಪ್ರಧಾನ ಮಂತ್ರಿ ರಾನಿಲ್‌ ವಿಕ್ರಮಸಿಂಘೆ
ಶ್ರೀಲಂಕಾದ ಪ್ರಧಾನ ಮಂತ್ರಿ ರಾನಿಲ್‌ ವಿಕ್ರಮಸಿಂಘೆ    

ಕೊಲಂಬೊ: ಸರ್ಕಾರಿ ನೌಕರರಿಗೆ ಸಂಬಳ ಪಾವತಿಸಲು ನೋಟು ಮುದ್ರಿಸಲು ಅನುಮತಿ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಶ್ರೀಲಂಕಾದ ನೂತನ ಪ್ರಧಾನ ಮಂತ್ರಿ ರಾನಿಲ್‌ ವಿಕ್ರಮಸಿಂಘೆ ಅವರು ಹೇಳಿದ್ದಾರೆ.

ಸದ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ದೇಶವನ್ನು ಉದ್ದೇಶಿಸಿ ಸೋಮವಾರ ಅವರು ಮಾತನಾಡಿದರು.

‘ನನಗೆ ಸತ್ಯವನ್ನು ಮರೆಮಾಚುವ ಮತ್ತು ಸಾರ್ವಜನಿಕರಿಗೆ ಸುಳ್ಳು ಹೇಳುವ ಬಯಕೆಯಿಲ್ಲ. ಈ ಸಂಗತಿಗಳು ಅಹಿತಕರ, ಭಯಾನಕವಾಗಿದ್ದರೂ ಅದನ್ನು ಹೇಳಲೇಬೇಕಾಗಿದೆ’ ಎಂದಿದ್ದಾರೆ.

ADVERTISEMENT

ಪ್ರಸ್ತುತ ಭಾರೀ ನಷ್ಟದಲ್ಲಿರುವ ‘ಶ್ರೀಲಂಕನ್ ಏರ್‌ಲೈನ್ಸ್’ ಅನ್ನು ಖಾಸಗೀಕರಣಗೊಳಿಸಲು ಚಿಂತಿಸಿರುವುದಾಗಿಯೂ ಪ್ರಧಾನಿ ವಿಕ್ರಮಸಿಂಘೆ ಹೇಳಿದರು.
ಕಳೆದ ವರ್ಷ ಶ್ರೀಲಂಕಾ ಏರ್‌ಲೈನ್ಸ್ ₹960 ಕೋಟಿಯಷ್ಟು ನಷ್ಟ ಅನುಭವಿಸಿದೆ.

‘ನಾವು ಶ್ರೀಲಂಕನ್ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸಿದರೂ, ನಮ್ಮ ಕಷ್ಟ ಬಗೆಹರಿಯುವುದಿಲ್ಲ. ವಿಮಾನದೊಳಗೆ ಎಂದಿಗೂ ಕಾಲೇ ಇಡದ ಮುಗ್ಧ ಜನರು ಈ ನಷ್ಟ ಭರಿಸಬೇಕಾಗಿ ಬಂದಿದೆ’ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.