ADVERTISEMENT

ಮನೆಯಲ್ಲೇ ಇರಿ: ಕಾಬೂಲ್‌ನ ಮಹಿಳಾ ನೌಕರರಿಗೆ ತಾಲಿಬಾನ್ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 9:37 IST
Last Updated 19 ಸೆಪ್ಟೆಂಬರ್ 2021, 9:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌: ನಗರದ ಮಹಿಳಾ ಉದ್ಯೋಗಿಗಳು ಮನೆಯೊಳಗೇ ಇರಬೇಕು ಎಂದು ರಾಷ್ಟ್ರದ ತಾಲಿಬಾನ್‌ ಆಡಳಿತ ಘೋಷಿಸಿದೆ ಎಂದು ಇಲ್ಲಿನ ಹಂಗಾಮಿ ಮೇಯರ್‌ ಹಮ್ದುಲ್ಲಾ ನಮೋನಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ವಿನ್ಯಾಸ ಮತ್ತು ಎಂಜಿನಿಯರಿಂಗ್‌ ವಿಭಾಗಳಲ್ಲಿನ ಮಹಿಳಾ ಕುಶಲಕರ್ಮಿಗಳು ಮತ್ತು ಮಹಿಳಾ ಶೌಚಾಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮಾತ್ರ ಕೆಲಸ ಮಾಡಲು ಅನುಮತಿ ಇದೆ ಎಂದು ತಿಳಿಸಿದ್ದಾರೆ.

ಕಾಬೂಲ್‌ ಮುನ್ಸಿಪಲ್‌ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗಳ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಅವರಿಗೆ ವೇತನ ಸದ್ಯಕ್ಕೆ ಸಿಗಲಿದೆ ಎಂದಿದ್ದಾರೆ.

1990ರಲ್ಲಿ ತಾಲಿಬಾನ್‌ ಸರ್ಕಾರ ಇದ್ದ ಸಂದರ್ಭದಲ್ಲೂ ಶಾಲೆ ಮತ್ತು ಉದ್ಯೋಗದಿಂದ ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ದೂರ ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.